ಹುನಗುಂದ ಪುರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ತಾಲೂಕು ಆರೋಗ್ಯ ಅಧಿಕಾರಿ ಸಂಗಮೇಶ ಅಂಗಡಿ ಚಾಲನೆ ನೀಡಿದರು. ಸಿಡಿಪಿಒ ವೆಂಕಪ್ಪ ಗಿರಿತಿಮ್ಮಣ್ಣನವರ, ಪುರಸಭೆಯ ಮ್ಯಾನೇಜರ್ ಎಂ.ಎಸ್. ಕಳ್ಳಿಗುಡ್ಡ ಇದ್ದರು. 
ಜಿಲ್ಲೆ

ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ

Vijayapura - Desk - Gurappa Lokuri

ಹುನಗುಂದ: ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ ನೀರು ನಿಲ್ಲದಂತೆ ಸ್ವಚ್ಛಗೊಳಿಸುವ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳು ಬಾರದಂತೆ ನೋಡಿಕೊಳ್ಳಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಸಂಗಮೇಶ ಅಂಗಡಿ ತಿಳಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ, ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಡೆಂೆ ಮತ್ತು ಚಿಕೂನ್ ಗುನ್ಯಾ ಜ್ವರ ನಿಯಂತ್ರಣಕ್ಕಾಗಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೀರಿನ ತೊಟ್ಟಿ, ಹೂವಿನ ಕುಂಡ, ಟೈರ್-ಟ್ಯೂಬ್, ತೆಂಗಿನ ಚಿಪ್, ಖಾಲಿ ಬಾಟಲಿಗಳಲ್ಲಿನ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಗಟ್ಟಬೇಕು. ನೀರಿನ ಮೂಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ರೋಗದ ಲಕ್ಷಣಗಳು ಕಂಡುಬಂದರೆ ತಜ್ಞೆ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಪುರಸಭೆ ಮ್ಯಾನೇಜರ್ ಎಂ.ಎಸ್. ಕಳ್ಳಿಗುಡ್ಡ ಮಾತನಾಡಿ, ಸೊಳ್ಳೆಗಳಿಂದ ಹರಡುವ ಡೆಂೆ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ರೋಗಗಳನ್ನು ತಡೆಗೆ ಮುಂಜಾಗ್ರತವಾಗಿ ಪುರಸಭೆಯಿಂದ ಫಾಗಿಂಗ್ ಮತ್ತು ಮೆಲಾಥಿನ್ ಪೌಡರ್ ಸಿಂಪಡಿಸಲಾಗಿದೆ. ಆರೋಗ್ಯ ಇಲಾಖೆ ವತಿಯಿಂದ ಪ್ರತಿ ಶುಕ್ರವಾರ ಮನೆ ಮನೆಗೂ ತೆರಳಿ ಲಾರ್ವಾ ಸಮೀಕ್ಷೆ ನಡೆಸಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಸಿಡಿಪಿಒ ವೆಂಕಪ್ಪ ಗಿರಿತಿಮ್ಮಣ್ಣನವರ, ಪುರಸಭೆ ಸಿಬ್ಬಂದಿ ಡಿ.ಡಿ. ಹಗೇದಾಳ, ಮುತ್ತಣ್ಣ ಹುಣಶ್ಯಾಳ, ಮಹಾಂತೇಶ ತಾರಿವಾಳ, ಬಾಬು ಲೈನ್, ನೀರುಪಾದಿ ಬದಾಮಿ ಹಾಗೂ ಆರೋಗ್ಯ, ಪುರಸಭೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತರು ಇದ್ದರು.