ಎಸ್‌ಎಸ್‌ಎಲ್‌ಸಿ. ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರವೀಶ್, ಮಮತಾ, ಆಶಾರಾಣಿ, ದಾಕ್ಷಾಯಿಣಿ ನಾಗರಾಜ್ ಇತರರು ಇದ್ದರು. 
ಜಿಲ್ಲೆ

ಕಲಿಕೆ ವೇಳೆ ಸಾಮಾಜಿಕ ಜಾಲತಾಣ ತ್ಯಜಿಸಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಗಂಡಸಿ: ವಿದ್ಯಾರ್ಥಿಯು ತನ್ನ ಕಲಿಕಾ ಅವಧಿಯಲ್ಲಿ ಸಾಮಾಜಿಕ ಅರಿವು ಕಠಿಣ ಪರಿಶ್ರಮದೊಂದಿಗೆ ಗುರಿ ಸಾಧನೆಯ ಛಲದೊಂದಿಗೆ ಓದಿನತ್ತ ಗಮನ ಹರಿಸಿದಲ್ಲಿ ಒಂದಿಲ್ಲೊಂದು ದಿನ ಯಶಸ್ಸು ತಮ್ಮದಾಗಲಿದೆ ಎಂದು ಶ್ರೀ ಶಂಭುಲಿಂಗೇಶ್ವರ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ರವೀಶ್ ಹೇಳಿದರು

2024-25 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಗಂಡಸಿ ಶ್ರೀ ಶಂಭುಲಿಂಗೇಶ್ವರ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬುಧವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭವಿಷ್ಯದಲ್ಲಿ ಭಾವಿ ಪ್ರಜೆಗಳೇ ಇಂದಿನ ಪ್ರತಿಭಾವಂತ ವಿದ್ಯಾರ್ಥಿಗಳು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸಬೇಕು. ಇದಕ್ಕೆ ಪಾಲಕರ ಸಹಕಾರ ಅತ್ಯಗತ್ಯ, ವಿದ್ಯಾರ್ಥಿ ತನ್ನ ಕಲಿಕಾ ಅವಧಿಯಲ್ಲಿ ಸಾಮಾಜಿಕ ಜಾಲತಾಣ, ಮೊಬೈಲ್ ಬಳಕೆಯನ್ನು ತ್ಯಜಿಸಬೇಕು. ಇವುಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ವಿಚಲಿತಗೊಳಿಸುವುದಲ್ಲದೆ ಮನಸ್ಸು ವಿಚಲಿತಗೊಂಡು ಕಲಿಕೆಯ ಮೇಲೆ ಭಾರಿ ಪರಿಣಾಮ ಬೀರಲಿದೆ. ಜತೆಗೆ ಕಲಿಕಾ ಸಾಮರ್ಥ್ಯವು ಕುಂಠಿತವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಶಂಭುಲಿಂಗೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕಿ ಮಮತಾ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ರಾಣಿ, ಪ್ರತಿಭಾ ಪುರಸ್ಕಾರದ ಪ್ರಯೋಜಕರಾದ ದಾಕ್ಷಾಯಿಣಿ ನಾಗರಾಜ್, ಶಿಕ್ಷಕರಾದ ದೇವಿ ಪ್ರಸಾದ್, ತೇಜಮೂರ್ತಿ, ಗೋವಿಂದೇಗೌಡ, ಶ್ರೀನಿವಾಸ್, ಹನುಮಪ್ಪ ವಿದ್ಯಾರ್ಥಿಗಳ ಪಾಲಕರು, ಸಿಬ್ಬಂದಿ ಹಾಜರಿದ್ದರು.