ಜಿಲ್ಲೆ

ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲ ಬಳಸಿ

Vijayapura - Desk - Gurappa Lokuri

ರಬಕವಿ/ಬನಹಟ್ಟಿ: ಪ್ರತಿಯೊಬ್ಬರೂ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕಿದೆ ಎಂದು ಪರಿಸರ ಸಂಘದ ಸಂಚಾಲಕ ಪರಸುರಾಮ ಒಡೆಯರ ಹೇಳಿದರು.

ರಬಕವಿಯ ಬಸ್ ನಿಲ್ದಾಣದಲ್ಲಿ ಸೋಮವಾರ ಪ್ರಯಾಣಿಕರಿಗೆ, ಚಾಲಕ-ನಿರ್ವಾಹಕರಿಗೆ ಕೈಚೀಲ ವಿತರಿಸಿ ಅಭಿಯಾನ ನಡೆಸಿ ಅವರು ಮಾತನಾಡಿದರು.

ದೈನಂದಿನ ಬದುಕಿನಲ್ಲಿ ಪರಿಸರ ಕಾಳಜಿ ವಹಿಸುವುದರೊಂದಿ ಪ್ಲಾಸ್ಟಿಕ್ ನಿರ್ಮೂಲನೆಗೆ ಕೈ ಜೋಡಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕೈ ಚೀಲಗಳನ್ನು ಬಳಸಬೇಕು ಎಂದರು.

ಅಮಿತ್ ಶಿಲ್ಲೆದಾರ, ಚೇತನ ಕೋಪರ್ಡೆ, ಪಿ.ಆರ್. ಒಡೆಯರ್, ಬಿ.ಜಿ. ನಾವಿ ಇತರರಿದ್ದರು.