??????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಆವನಿ ಬ್ರಹ್ಮರಥೋತ್ಸವ ಸಂಪನ್ನ

Kolar

ಮುಳಬಾಗಿಲು: ತಾಲೂಕಿನ ಆವನಿಯ ಪುರಾಣ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ದೇವಾಲಯದಲ್ಲಿ ರಥೋತ್ಸವ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯ ನಡೆದವು. ಕಾವಾಕ್ಷಿದೇವಿ ಸಮೇತ ಶ್ರೀ ರಾಮಲಿಂಗೇಶ್ವರ ಸ್ವಾಮಿಯನ್ನು ರಥದಲ್ಲಿ ಕುಳ್ಳಿರಿಸಿದ ನಂತರ ಶೃಂಗೇರಿ ಶಾರದಾ ಮಠದಿಂದ ಪೂಜೆ ಸಲ್ಲಿಸಲಾಗಿತ್ತು. ಬಳಿಕ ಪಕ್ಕದ ಕೀಲು ಹೊಳಲಿ ಗ್ರಾಮದ ದಲಿತರೇ ಪೂಜಿಸಿಕೊಂಡು ಹೊತ್ತು ತರುವ ಸಲ್ಲಾಪುರಮ್ಮ ಉತ್ಸವ ಮೆರವಣಿಗೆ ಆವನಿ ಗ್ರಾಮಕ್ಕೆ ಬಂದು ರಥಕ್ಕೆ ತಾಗಿದ ನಂತರ ರಥ ಮುಂದಕ್ಕೆ ಸಾಗಿತು.

ಕೋಲಾರ ಜಿಲ್ಲೆ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಕ್ಕೆ ಮೆಣಸು, ಉಪ್ಪು, ಬಾಳೆಹಣ್ಣು ಎಸೆದು ಹರಕೆ ತೀರಿಸಿದರು. ಸೇವಾಕರ್ತರು ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಪಾನಕ, ಕೋಸಂಬರಿ ವಿತರಣೆ ವಾಡಿದರಲ್ಲದೆ, ವಿವಿಧ ಕಡೆ ಅನ್ನದಾಸೋಹ ಏರ್ಪಡಿಸಿದ್ದರು.

ಪ್ರಧಾನ ಅರ್ಚಕ ರಮಣಮೂರ್ತಿ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.

ವಾದ್ಯಗೋಷ್ಠಿ, ವಿವಿಧ ಕಲಾ ತಂಡಗಳು ಉತ್ಸವಕ್ಕೆ ಮೆರುಗು ನೀಡಿದವು. ಪ್ರಾಥಮಿಕ ಶಾಲಾ ಆವರಣದಲ್ಲಿ ಸಿಡಿಪಿಒ ಇಲಾಖೆಯಿಂದ ಮಹಿಳಾ ಸ್ವಸಹಾಯ ಸಂಗಳ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಶಾಸಕ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ವಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಎಸಿ ಸೋಮಶೇಖರ್, ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಡಿವೈಎಸ್‌ಪಿ ಕೆ.ಸಿ.ಗಿರಿ, ಸಿಪಿಐ ಎನ್.ಗೋಪಾಲ್‌ನಾಯಕ್, ಜಿಪಂ ಸದಸ್ಯ ಆರ್.ಕೃಷ್ಣಪ್ಪ, ತಾಪಂ ಸದಸ್ಯ ಆವನಿ ರವಿಶಂಕರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಅರ್.ರಾಜೇಂದ್ರಗೌಡ, ಮುಖಂಡರಾದ ಕಲ್ಲುಪಲ್ಲಿ ಪ್ರಕಾಶ್, ನಗರಸಭೆ ಸದಸ್ಯ ಜಗನ್‌ಮೋಹನರೆಡ್ಡಿ ಮತ್ತಿತರರು ಭಾಗವಹಿಸಿದ್ದರು.