ಜಿಲ್ಲೆ

ಪ್ರಗತಿಯತ್ತ ಅವರಗೋಳ ಪಿಕೆಪಿಎಸ್​

ಸೋಮಲಿಂಗ ತಳವಾರ

ಹುಕ್ಕೇರಿ: ತಾಲೂಕಿನ ಅವರಗೋಳ ಗ್ರಾಮದ ಪಿಕೆಪಿಎಸ್​ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 13.80 ಲ ರೂ. ನಿವ್ವಳ ಲಾಭ ಗಳಿಸಿದೆ ಎಂದು ಪಿಕೆಪಿಎಸ್​ ಅಧ್ಯಕ್ಷ ಬಸಲಿಂಗ ಕರಗುಪ್ಪಿ ಹೇಳಿದರು.

ಅವರಗೋಳ ಗ್ರಾಮದದಲ್ಲಿ ಸೋಮವಾರ ಪಿಕೆಪಿಎಸ್​ನ 80ನೇ ವರ್ಷದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 32.75 ಲ ರೂ. ಕಾಯ್ದಿಟ್ಟ ನಿಧಿ, 1094 ಸದಸ್ಯರು, 8.78 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ.7.1 ಕೋಟಿ ರೂ. ಸಾಲ ವಿತರಿಸಿದೆ ಸದಸ್ಯರಿಗೆ ಶೇ. 7ರಷ್ಟು ಲಾಭಾಂಶ ಹಂಚಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪಿಕೆಪಿಎಸ್​ ಕಾರ್ಯವ್ಯಾಪ್ತಿಯಲ್ಲಿದ್ದ ನೊಗನಿಹಾಳ ಸದಸ್ಯರನ್ನು ನೊಗನಿಹಾಳ ಗ್ರಾಮದಲ್ಲಿ ಪ್ರಾರಂಭವಾದ ಪಿಕೆಪಿಎಸ್​ಗೆ ವರ್ಗಾಯಿಸಲು ಮತ್ತು ಸದಸ್ಯರು ನಿಧನರಾದಲ್ಲಿ 2 ಸಾವಿರ ರೂ. ಅಂತ್ಯಸಂಸ್ಕಾರಕ್ಕೆ ನೀಡಲು ಸಭೆಯಲ್ಲಿ ಅನುಮತಿ ಪಡೆಯಲಾಯಿತು.

ಪಿಕೆಪಿಎಸ್​ ಮುಖ್ಯ ಕಾರ್ಯನಿರ್ವಾಹಕ ಗೋಪಾಲ ಡೋನವಾಡಿ ವಾರ್ಷಿಕ ವರದಿ ವಾಚಿಸಿದರು. ಸಂದ ಉಪಾಧ್ಯಕ್ಷ ಮಾರುತಿ ನಾಗನ್ನವರ, ನಿರ್ದೇಶಕರಾದ ರವೀಂದ್ರ ಕಲ್ಲಟ್ಟಿ, ಸುರೇಶ ಸರನಾಯಿಕ, ಸದಾಶಿವ ಕರಗುಪ್ಪಿ, ಈರಪ್ಪ ತೊದಲ, ನಿರ್ವಾಣಿ ಮುಂಡಾಶಿ, ನಾಗರಾಜ ಪಾಟೀಲ, ದಯಾನಂದ ಖಾತೇದಾರ, ರಾಜಶ್ರೀ ಪಾಟೀಲ, ಶೆಲಾ ಬಾಳೋಜಿ, ಗೋಪಾಲ ಡೋನವಾಡಿ ಇತರರಿದ್ದರು.