ಕೆರೂರ: ಸರ್ಕಾರ ಪ್ರಜೆಗಳ ರಕ್ಷಣೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅನೇಕ ಜನರಿಗೆ ಅವುಗಳ ಬಳಕೆಯ ವಿಧಾನ ಗೊತ್ತಿಲ್ಲ. ಅದರ ಅರಿವು ನೆರವು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ಬಾಗಲಕೋಟೆ ಬನಶಂಕರಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ಗಿರೀಶ ಮಾಸೂರಕರ ಹೇಳಿದರು.
ಕೆರೂರ ಸಮೀಪದ ನರೇನೂರ ಎಲ್.ಟಿ.1ರ ದುರ್ಗಾದೇವಿ ಗುಡಿಯಲ್ಲಿ ಶನಿವಾರ ರೋಟರಿ ಸಂಸ್ಥೆ, ಸರ್ಚ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆ, ಇಸ್ಲಾಂ ವಿಜಂ ೌಂಡೇಷನ್ ಬಾಗಲಕೋಟೆ ಸಹಯೋಗದಲ್ಲಿ ಆಯೋಜಿಸಿದ್ದ ನೇತ್ರ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಉಚಿತ ನೇತ್ರ ಚಿಕಿತ್ಸೆ ಅವಶ್ಯಕತೆ ಇರುವ ಲಾನುಭವಿಗಳಿಗೆ ಕನ್ನಡಕ ವಿತರಿಸಲಾಗುವುದು. ಶಸ್ತ್ರಚಿಕಿತ್ಸೆಗೆ ಅಗತ್ಯ ಇರುವವರಿಗೆ ಫೌಂಡೇಷನ್‌ದಿಂದ ಶೇ. 50ರಷ್ಟು ಹಣ ಕೊಡಲಾಗುವುದು. ಲಾನುಭವಿಗಳು ಶಿಬಿರದ ಲಾಭ ಪಡೆಯಬೇಕೆಂದರು.
ಸರ್ಚ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ವೆಂಕಟೇಶ ಮುಖೆ ಮಾತನಾಡಿ, ಹಿಂದುಳಿದ ಸರ್ಕಾರಿ ಸೌಲಭ್ಯ ವಂಚಿತ ಗ್ರಾಮಗಳನ್ನು ಗುರುತಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಈಗ ನರೇನೂರ ಎಲ್.ಟಿ.1 ಮತ್ತು 2 ಹಾಗೂ ಚಿಂಚಲಕಟ್ಟಿ ತಾಂಡೆಗಳನ್ನು ಗುರುತಿಸಿದ್ದು ನೇತ್ರ ಸಮಸ್ಯೆಯಿರುವ 1500 ಜನರಿಗೆ ಚಿಕಿತ್ಸೆ ನೀಡಿ ಕನ್ನಡಕ ವಿತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಅನೇಕ ಗ್ರಾಮಗಳನ್ನು ಗುರುತಿಸುವ ಕಾರ್ಯನಡೆದಿದೆ. ಮತ್ತು ರಾಜ್ಯದ 8 ಜಿಲ್ಲೆಗಳಲ್ಲಿ 1 ರಿಂದ 10ನೇ ತರಗತಿ ಮಕ್ಕಳಿಗೆ ಉಚಿತ ತಪಾಸಣೆ ಮಾಡಿ ಉಚಿತ ಕನ್ನಡಕ ವಿತರಿಸುವ ಕಾರ್ಯ ಮಾಡಲಾಗುತ್ತಿದೆ. ಈಗ ಯಾದಗಿರಿ ಜಿಲ್ಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ನಮ್ಮ ಸಂಸ್ಥೆಗಳು ನಿರಪೇಕ್ಷೆಯಿಂದ ಜನರ ಸೇವೆ ಮಾಡುತ್ತಿದ್ದು ಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಸಂತೋಷ ನಾವಲಗಿ, ಸಹಾಯಕ ನಿರ್ದೇಶಕಿ ಮಂಜುಳಾ ಮುಖೆ, ಸಚೀನ ಸೇಡಂಕರ, ಸಂತೋಷ ಮುರನಾಳ, ಮಲ್ಲಿಕಾರ್ಜುನ ಹದ್ಲಿ, ಮಲ್ಲಿನಾಥ ಹಿರೇಮಠ ಇತರರಿದ್ದರು.