ಮುದಗಲ್ ನಾಡ ಕಚೇರಿ ಬಳಿ ಕೃಷಿ ಅಧಿಕಾರಿ ಆಕಾಶ ದಾನಿ ಇ ಕೆವೈಸಿ ಮಾಡಿಸುವ ಮೂಲಕ ಫಸಲ್‌ಬಿಮಾ ಯೋಜನೆ ಕುರಿತು ರೈತರಿಗೆ ಅರಿವು ಮೂಡಿಸಿದರು. ಗ್ರಾಮ ಲೆಕ್ಕಾಧಿಕಾರಿ ಸಂಗಪ್ಪ, ಬಸವರಾಜ, ಮೈಬೂಬ್, ಹನುಮಂತ ಇದ್ದರು. 
ಜಿಲ್ಲೆ

ಫಸಲ್‌ಬಿಮಾ ಯೋಜನೆ ಲಾಭ ಪಡೆಯಿರಿ

ರುದ್ರಪ್ಪ ವಾಲಿ

ಮುದಗಲ್: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ರೈತರು ಜಮೀನುಗಳ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಮಾಡುವ ಕುರಿತು ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆಕಾಶ ದಾನಿ, ಅಭಿಯಾನದ ಮೂಲಕ ರೈತರಿಗೆ ಶನಿವಾರ ಅರಿವು ಮೂಡಿಸಿದರು. ಹೋಬಳಿ ವ್ಯಾಪ್ತಿಯಲ್ಲಿ 1758 ರೈತರು ಯೋಜನೆಯಿಂದ ಹೊರಗುಳಿದಿದ್ದಾರೆ. ಕೂಡಲೇ ಇ-ಕೆವೈಸಿ ಮಾಡಿಕೊಳ್ಳುವ ಮೂಲಕ ಯೋಜನೆಯ ಲಾಭ ಪಡೆಯಬೇಕು ಎಂದು ತಿಳಿಸಿದರು.

ಇದನ್ನೂ ಓದಿ:ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರಿಂದ ಕಾಡಾ ಕಚೇರಿ ಮುಂದೆ ಪ್ರತಿಭಟನೆ
ಸ್ಥಳೀಯ ನಾಡ ಕಚೇರಿ ಹಾಗೂ ಸಮೀಪದ ಅಡವಿಬಾವಿ (ಆ) ಗ್ರಾಮಕ್ಕೆ ಖುದ್ದು ನೀಡಿ ರೈತರ ದಾಖಲೆಗಳನ್ನು ಪಡೆದು ಸ್ಥಳದಲ್ಲಿಯೇ ಇ-ಕೆವೈಸಿ ಮಾಡಿಸುವ ಮೂಲಕ ಫಸಲ್ ಬಿಮಾ ಯೋಜನೆ ಕುರಿತು ಮಾಹಿತಿ ನೀಡಿದರು. ರೈತರಾದ ಶೋಯಬ್ ಅಕ್ತಾರ್, ರಾಮನಗೌಡ, ಶಿವಾನಂದ, ಶಾಬುದ್ದೀನ್, ಯಮನೂರುಸಾಬ, ಅಮರೇಶ ಇತರರಿದ್ದರು.