ಜಿಲ್ಲೆ

ಕುಕ್ಕೆಯಲ್ಲಿ ಸ್ವಯಂಚಾಲಿತ ರ‌್ಯಾಂಪ್ : ಭಕ್ತರಿಗೆ ವಿಶೇಷ ಸೌಲಭ್ಯ ಹಿರಿಯರು, ಅಂಗವಿಕಲರಿಗೆ ಸೌಕರ್ಯ

ಸೌಮ್ಯ ಆರ್

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಿರಿಯ ನಾಗರಿಕರು ಮತ್ತು ಅಂಗವಿಕಲ ಭಕ್ತರ ಅನುಕೂಲಕ್ಕಾಗಿ ಶ್ರೀ ದೇಗುಲದಲ್ಲಿ ಸ್ವಯಂಚಾಲಿತ ರ‌್ಯಾಂಪ್ ಆಸನ ಅಳವಡಿಸಲಾಗುವುದು. ಈಗಾಗಲೇ ರ‌್ಯಾಂಪ್ ಅಳವಡಿಸುವ ಕಾರ್ಯ ಆರಂಭವಾಗಿದ್ದು, ಕಿರುಷಷ್ಠಿ ಮಹೋತ್ಸವದ ಹಿನ್ನೆಲೆ ಶ್ರೀವೇ ಈ ವ್ಯವಸ್ಥೆ ಭಕ್ತರ ಉಪಯೋಗಕ್ಕೆ ಲಭಿಸಲಿದೆ.

ಅಧಿಕಾರಿಗಳ ಪರಿಶ್ರಮ: ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ ವಿಶೇಷ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕೆ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸಾಥ್ ನೀಡಿದ್ದಾರೆ. ಲೋಕೋಪಯೋಗಿ ಅಭಿಯಂತ ಪ್ರಮೋದ್ ಕುವಾರ್ ಮತ್ತು ದೇಗುಲದ ಅಭಿಯಂತ ಉದಯ ಕುವಾರ್ ಆಡಳಿತಾಧಿಕಾರಿಗಳಿಗೆ ಸಹಕಾರ ನೀಡಿದ್ದರು. ಇನ್ನು ಮುಂದೆ ಸ್ವಯಂಚಾಲಿತ ರ‌್ಯಾಂಪ್ ಆಸನದಲ್ಲಿ ಆರಾಮವಾಗಿ ಕುಳಿತು ಶ್ರೀ ದೇಗುಲದ ಹೊರಾಂಗಣಕ್ಕೆ ಪ್ರವೇಶಿಸಬಹುದು ಮತ್ತು ಹೊರಕ್ಕೆ ತೆರಳಬಹುದು. ಈಗಾಗಲೇ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಈ ವಿಶೇಷ ವ್ಯವಸ್ಥೆ ಕಂಡ ಹಿರಿಯ ನಾಗರಿಕ ಭಕ್ತರು ದೇವಳದ ಆಡಳಿತವನ್ನು ಶ್ಲಾಸಿದ್ದಾರೆ. ಮುಂದೆ ಹೆಚ್ಚಿನ ಭಕ್ತರು ತೆರಳಲು ಲ್‌ಟಿ ಅಳವಡಿಸಲು ಚಿಂತಿಸಲಾಗಿದೆ.

ದೇವರ ಆಶೀರ್ವಾದ ಮತ್ತು ತಂಡದ ಶ್ರಮದಿಂದ ಶೀಘ್ರ ರ‌್ಯಾಂಪ್ ಅಳವಡಿಕೆ ಸಂಪೂರ್ಣವಾಗಲಿದೆ. ಇದು ಭಕ್ತರಿಗೆ ಪ್ರವೇಶಿಸಲು ಮತ್ತು ತೆರಳಲು ವಿಶೇಷ ಅನುಕೂಲ ಒದಗಿಸಲಿದೆ. ಕಾಯ್ದೆ ಪ್ರಕಾರ ಎಲ್ಲ ವಿಚಾರದಲ್ಲಿ ಸವಾನ ಅವಕಾಶವನ್ನು ಎಲ್ಲರಿಗೂ ನೀಡಬೇಕು ಎಂಬ ದೃಷ್ಟಿಕೋನದಿಂದ ಈ ವಿಶೇಷ ವ್ಯವಸ್ಥೆಯನ್ನು ದೇಗುಲದಲ್ಲಿ ಅಳವಡಿಸಲಾಗಿದೆ. ಮುಂದೆ ದೇವಳದಲ್ಲಿ ಲ್‌ಟಿ ವ್ಯವಸ್ಥೆ ವಾಡಲಾಗುವುದು. ಜುಬಿನ್ ಮೊಹಾಪಾತ್ರ, ಆಡಳಿತಾಧಿಕಾರಿ
ಸ್ವಯಂಚಾಲಿತ ರ‌್ಯಾಂಪ್ ಆಸನ ವ್ಯವಸ್ಥೆಯಿಂದ ಭಕ್ತರು ಆಸನದಲ್ಲಿ ಕುಳಿತು ದೇವಳದ ಹೊರಾಂಗಣಕ್ಕೆ ತೆರಳಬಹುದು ಮತ್ತು ಹೊರ ಭಾಗಕ್ಕೆ ಬರಬಹುದು. ಮೆಟ್ಟಿಲು ಇಳಿದು ಹೋಗಲು ಕಷ್ಟಪಡುತ್ತಿದ್ದ ಭಕ್ತರಿಗೆ ಇದು ಸಹಕಾರ ನೀಡಲಿದೆ. ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ

ವಿದೇಶಿ ನಿರ್ಮಿತ ಯಂತ್ರ

ಈ ಸ್ವಯಂಚಾಲಿತ ರ‌್ಯಾಂಪ್ ಆಸನವನ್ನು ನೆದರ್‌ಲ್ಯಾಂಡ್‌ನಿಂದ ತರಿಸಲಾಗಿದೆ. 4.17 ಲಕ್ಷ ರೂ. ವೆಚ್ಚದಲ್ಲಿ ವಿದೇಶಿ ತಂತ್ರಜ್ಞಾನ ಹೊಂದಿದ ವಿದೇಶಿ ನಿರ್ಮಿತ ವ್ಯವಸ್ಥೆಯನ್ನು ಕುಕ್ಕೆ ದೇವಳದಲ್ಲಿ ಅಳವಡಿಸಲಾಗುವುದು. ಎಎಆರ್‌ಡಿಐಎನ್‌ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಳವಡಿಕೆ ಕಾರ್ಯ ನಡೆಸುತ್ತಿದೆ.