ಬನ್ನಿಕುಪ್ಪೆ ಗ್ರಾಮ ಪಂಚಾಯತಿ ಆವರಣದಲ್ಲಿಂದು ಪಂಚಾಯಿತಿ ಕೆಡಿಪಿ ಸಭೆ ಸಭೆಯು ಆಯೋಜಿಸಲಾಗಿತ್ತು. 
ಜಿಲ್ಲೆ

ಬನ್ನಿಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಕೆಡಿಪಿ ಸಭೆ

ಬನ್ನಿಕುಪ್ಪೆ: ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿಂದು ಪಂಚಾಯಿತಿ ಕೆಡಿಪಿ ಸಭೆ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಕೃಷಿ ಇಲಾಖೆಯಲ್ಲಿ ದೊರೆಯುವ ಬಿತ್ತನೆ ಬೀಜ, ಯಂತ್ರೋಪಕರಣ, ನೀರಾವರಿ ಸಲಕರಣೆ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಹಾಗೂ ಪೂರ್ವ ಮುಂಗಾರು, ಮುಂಗಾರು, ಹಿಂಗಾರು, ಬೇಸಿಗೆ ಬೆಳೆಯ ವಿಮೆಯ ಬಗ್ಗೆ ಕೃಷಿ ಇಲಾಖೆ ಅಧಿಕಾರಿ ಡಿ.ಆರ್.ವೆಂಕಟೇಶ್ ವಿವರಿಸಿದರು.

ತೋಟಗಾರಿಕೆ ಇಲಾಖೆಯಲ್ಲಿ ತೆಂಗು ಪುನಶ್ಚ್ಚೇತನ ಕಾರ್ಯಕ್ರಮ ಬಗ್ಗೆ ಹಾಗೂ ಬಾಳೆ, ತೆಂಗು, ಹನಿ ನೀರಾವರಿಗೆ ಸರ್ಕಾರದ ಸಿಗುವ ಸಹಾಯಧನ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿ ನೀತಿನ್ ಮಾಹಿತಿ ನೀಡಿದರು. ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಮೇ 15ರ ನಂತರ ಸಸಿಗಳನ್ನು ವಿತರಣೆ ಮಾಡಲಾಗುವುದು. ಪ್ರೋತ್ಸಾಹಧನ ಸಹ ನೀಡುವುದು ಎಂದು ಅರಣ್ಯ ಇಲಾಖೆಯಿಂದ ಮುತ್ತಪ್ಪ ತಿಳಿಸಿದರು.

ಗ್ರಾಪಂ ಅಧ್ಯಕ್ಷ ಬಿ.ಆರ್.ಗೋವಿಂದನಾಯಕ, ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪ್ರಸನ್ನ, ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯೆ ಪವಿತ್ರಾ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಸಿ.ಚಂದ್ರಶೇಖರ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.