ಉಡುಪಿ: ನಗರಸಭೆ, ಆರ್ ಟಿಒ ಹಾಗೂ ಪೊಲೀಸ್ ಇಲಾಖೆ ನಗರದಲ್ಲಿ ಸರ್ವೇ ನಡೆಸಿದ್ದು, ನಗರದಲ್ಲಿ ಹೆಚ್ಚುವರಿ ರಿಕ್ಷಾ ನಿಲ್ದಾಣಗಳನ್ನು ನಿರ್ಮಿಸುವ ಬಗ್ಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಉಡುಪಿ ಆಟೋ ಚಾಲಕ ಮತ್ತು ಮಾಲೀಕರ ಸಂಘಟನೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದರು. ಜಿಲ್ಲಾಧಿಕಾರಿಗಳೊಂದಿಗೆ ಶೀಘ್ರವೇ ಚರ್ಚೆ ನಡೆಸಿ ಆಟೋ ನಿಲ್ದಾಣ ನಿರ್ಮಿಸಲು ಕ್ರಮಕೈಗೊಳ್ಳುತ್ತೇವೆ. ಆ ಬಳಿಕ ರಿಕ್ಷಾ ಚಾಲಕರ ಬಹುತೇಕ ಸಮಸ್ಯೆ ಬಗೆಹರಿಯಲಿದೆ. ಸೌಹಾರ್ದಯುವವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ಆಟೋ ಚಾಲಕರ ಸಭೆ
ಇದಕ್ಕೂ ಮುನ್ನ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಉಡುಪಿ ನಗರ ವ್ಯಾಪ್ತಿಯ ಎಲ್ಲ ಆಟೋ ಯೂನಿಯನ್ ಪದಾಧಿಕಾರಿಗಳ ಸಭೆ ನಡೆಯಿತು. ನಗರ ವ್ಯಾಪ್ತಿಯಲ್ಲಿರುವ ಆಟೋ ನಿಲ್ದಾಣಗಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ನಗರದ ಆಟೋ ಚಾಲಕರಿಗೆ ಬಾಡಿಗೆ ಮಾಡಲು ಅವಕಾಶ ಕಲ್ಪಿಸಲು ತೀಮಾರ್ನಿಸಲಾಯಿತು.
ಆಟೋ ನಿಲ್ದಾಣದ ಸಾಮರ್ಥ್ಯಕ್ಕೆ ಅನುಗುಣವಾಗಿ ಏಕಕಾಲದಲ್ಲಿ ಐದು ರಿಕ್ಷಾಕ್ಕಿಂತ ಕಡಿಮೆ ಇದ್ದಲ್ಲಿ ಬೇರೆ ರಿಕ್ಷಾಕ್ಕೆ ಬಾಡಿಗೆ ಮಾಡಲು ಅವಕಾಶ ಕಲ್ಪಿಸಿ ರ್ನಿಣಯ ಕೈಗೊಳ್ಳಲಾಯಿತು.
ಜೊತೆಗೆ ಹೊರ ಜಿಲ್ಲೆಯವರು ನಗರದಲ್ಲಿ ವಿಪರೀತ ಬಾಡಿಗೆ ಪಡೆದುಕೊಂಡು ರಿಾ ಚಾಲನೆ ನಡೆಸುತ್ತಿದ್ದು, ಇದರಿಂದ ನಗರದ ಆಟೋ ಚಾಲಕರಿಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ತಡೆಯಬೇಕು ಎಂದು ಚಾಲಕರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿವಿಧ ಯೂನಿಯನ್ ಮುಖಂಡರಾದ ಗೋಪಾಲ ಕೃಷ್ಣ ರಥಬೀದಿ, ಶಿವಾನಂದ ಮೂಡಬೆಟ್ಟು, ದೇವೇಂದ್ರ, ನಾರಾಯಣ, ವಿಠಲ ಜತ್ತನ್ನ, ಸದಾನಂದ, ಮೊಹಮ್ಮದ್ ಹಸನ್, ರುನಂದ ತಾಲೂಕೂ ಆಫೀಸ್, ನವಾಜ್ ಸಿಟಿ ಸ್ಟಾ$್ಯಂಡ್, ಸಿರಿಲ್ ನೊರ್ಹೊನ್ಹಾ, ದಿವಾಕರ್, ಅಬ್ದುಲ್ ಮೊಹಮ್ಮದ್, ಜಯಂತ್ ಕೆ., ಕರುಣಾಕರ, ನಾರಾಯಣ ಉಪಸ್ಥಿತರಿದ್ದರು. ಸಭೆ ಬಳಿಕ ರಿಕ್ಷಾ ಚಾಲಕರು ಕಾಲ್ನಾಡಿಗೆಯಲ್ಲಿ ಎಸ್ಪಿ ಕಚೇರಿಯವರೆಗೆ ತೆರಳಿ ಮನವಿ ಸಲ್ಲಿಸಿದರು.