ಜಿಲ್ಲೆ

ಪೊಲೀಸರಿಗೆ ದೂರು ನೀಡಿದ ದ್ವೇಷದಲ್ಲಿ ರಿಕ್ಷಾಕ್ಕೆ ಬೆಂಕಿ

ಗೋಪಾಲಕೃಷ್ಣ ಪಾದೂರ್


ಉಡುಪಿ: ಹನುಮಂತ ನಗರದಲ್ಲಿ ಶಾಮಿಯಾನ ಹಾಕುವ ವಿಚಾರದಲ್ಲಿ ನಡೆದ ಗಲಾಟೆ ಬಗ್ಗೆ ಪೊಲೀಸರಿಗೆ ದೂರು ನೀಡಿದ ಧ್ವೇಷದಲ್ಲಿ ನೆರೆಮನೆಯಾತ ರಿಕ್ಷಾಕ್ಕೆ ಬೆಂಕಿ ಹಚ್ಚಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.


 ಹನುಮಂತ ನಗರದ ದಿವಾಕರ ಬೆಳ್ಚಡ ಎಂಬವರ ಜೊತೆ ನೆರೆಮನೆಯ ಖಲೀಂ ಎಂಬಾತ ಜಗಳ ಮಾಡಿದ್ದು, ಇದೇ ವಿಚಾರದಲ್ಲಿ ದ್ವೇಷಸಾಧಿಸಿ  ದಿವಾಕರ್ ಅವರ ಮನೆಯ ಎದುರು ನಿಲ್ಲಿಸಿದ್ದ  ಆಟೋರಿಕ್ಷಾಗೆ ಬೆಂಕಿಹಚ್ಚಿ ಓಡಿಹೋಗಿದ್ದಾನೆ. ಇದರಿಂದ ರಿಕ್ಷಾದ ಟಾಪ್ ಹಾಗೂ ಹಿಂಭಾಗ ಸಂಪೂರ್ಣ ಸುಟ್ಟುಹೋಗಿದ್ದು, ಇದರಿಂದಾಗಿ ಸುಮಾರು 1 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.