ವೀರಗೋಟದಲ್ಲಿ ಆಟೋ ಪಲ್ಟಿಯಾಗಿ ನಜ್ಜುಗುಜ್ಜಾಗಿರುವುದು. 
ಜಿಲ್ಲೆ

ಆಟೋ ಪಲ್ಟಿಯಾಗಿ ಇಬ್ಬರು ದುರ್ಮರಣ

ನರೇಶ್ ಕುಮಾರ್

ದೇವದುರ್ಗ: ಜಾಲಹಳ್ಳಿ ಸಮೀಪದ ವೀರಗೋಟ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಇಬ್ಬರು ಸಾವಿಗೀಡಾಗಿದರೆ, ಮೂವರು ಗಾಯಗೊಂಡಿದ್ದಾರೆ.

ತಿಂಥಣಿ ಬ್ರಿಡ್ಜ್ ಗ್ರಾಮದ ಪದ್ದಮ್ಮ(65) ಹಾಗೂ ಮಾನಪ್ಪ (60) ಮೃತರು. ಆಶಾ ಕಾರ್ಯಕರ್ತೆ ನಿಂಗಮ್ಮಗೆ ಕಾಲು ಮುರಿದಿದ್ದು, ಪ್ರಯಾಣಿಕರಾದ ಅಮರೇಶ, ತಿಮ್ಮಣ್ಣ ಗಾಯಗೊಂಡಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಲಹಳ್ಳಿಯಿಂದ ತಿಂಥಣಿ ಬ್ರಿಡ್ಜ್‌ಗೆ ಪ್ರಯಾಣಿಕರನ್ನು ಕರೆದೊಯ್ಯುವಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.