ಮಂಗಳೂರು : ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಮೋಟಾರು ವಾಹನ ವಿಭಾಗದ ವತಿಯಿಂದ ಡಿ.14ರಂದು ಬೆಳಗ್ಗೆ 10.30ರಿಂದ ಒಂದು ದಿನದ ಮುಕ್ತ ವಾಹನ ಪ್ರದರ್ಶನ ಆಟೋ ಎಕ್ಸ್ಪೋ -2024 ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಆಟೋಮೊಬೈಲ್ ಪತ್ರಕರ್ತ ಗಿರೀಶ್ ಶೇಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀನಿವಾಸ ವಿ.ವಿ.ಯ ಕುಲಾಧಿಪತಿ
ಡಾ. ಸಿಎ.ಎ. ರಾಘವೇಂದ್ರ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಹ ಕುಲಾಧಿಪತಿ ಡಾ.ಎ.ಶ್ರೀನಿವಾಸ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 50ಕ್ಕೂ ಹೆಚ್ಚು ನವೀನ, ಪಾರಂಪರಿಕ ಕಾರುಗಳು, ಜೀಪ್‌ಗಳು, ಸೂಪರ್ ಬೈಕ್‌ಗಳನ್ನು ಆಟೋ
ಎಕ್ಸ್ಪೋದಲ್ಲಿ ಪ್ರದರ್ಶಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.