ಜಿಲ್ಲೆ

ಆಟೋ ಚಾಲಕರ ಪ್ರತಿಭಟನೆ

Dharwada - Basavaraj Idli

ಹುಬ್ಬಳ್ಳಿ: ಓಲಾ ಉಬರ್ ಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ ಹಾಗೂ ಹುಬ್ಬಳ್ಳಿ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದಿಂದ ಸೆ. 8ರಂದು ಬೆಳಗ್ಗೆ 11.-45ಕ್ಕೆ ನೀಲಿಜಿನ್ ರಸ್ತೆ ಲಕ್ಷ್ಮಿಕಾಂಪ್ಲೆಕ್ಸ್ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಆಟೋ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಪ್ರತಿಭಟನೆಯ ಮುಖಾಂತರ ಆಗ್ರಹಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮುರುಳಿ ಇಂಗಳಹಳ್ಳಿ ತಿಳಿಸಿದ್ದಾರೆ.