filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 51; 
ಜಿಲ್ಲೆ

ಕನ್ನಡ ನಾಡಿನ ವಿಚಾರದಲ್ಲಿ ಆಟೋ ಚಾಲಕರು ಮುಂದು

ಕೊಳ್ಳೇಗಾಲ : ಕನ್ನಡ ನಾಡು, ನುಡಿ, ಜಲ ಸಂರಕ್ಷಣೆ ವಿಚಾರದಲ್ಲಿ ಆಟೋ ಚಾಲಕರು ಸದಾ ಮುಂದು ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ಹೇಳಿದರು.

ಪಟ್ಟಣದ ಮಹಾನಾಯಕ ಭೀಮ್ ರಾವ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ದೇಶಿಸಿ ಮಾತನಾಡಿದರು.

ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಟೋ ಚಾಲಕರು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಅವರಿಗಿರುವ ನಾಡಿನ ಪ್ರೇಮ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು.

ಈ ವೇಳೆ ಆಟೋ ಚಾಲಕರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಾರ್ವಜನಿಕರಿಗೆ ಸಿಹಿ ಹಂಚಿದರು. ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು. ಆಟೋ ಚಾಲಕರು ಕನ್ನಡದ ಪರ ಘೋಷಣೆ ಕೂಗಿ ಕನ್ನಡ ಪ್ರೇಮ ಮೆರದರು.

ಕ್ರೈಸ್ತ ಸಮುದಾಯದ ಯುವ ಮುಖಂಡ ಆನಂದ್, ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಾಲಯದ ಅರ್ಚಕ ಕುಮಾರ್, ಮಹಾನಾಯಕ ಭೀಮ್ ರಾವ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಸ್.ಹರೀಶ್‌ಕುಮಾರ್, ಉಪಾಧ್ಯಕ್ಷ ಶಿವನಾಂದ, ಕಾರ್ಯದರ್ಶಿ ಮಹೇಶ್, ಗೌರವಾಧ್ಯಕ್ಷ ಹಾಲಿನ ಡೇರಿ ಮೂರ್ತಿ, ಖಜಾಂಚಿ ಮರಿಸ್ವಾಮಿ, ಸದಸ್ಯರಾದ ರಮೇಶ್, ಲೋಕೇಶ್, ಆನಂದ್ ಇದ್ದರು.