SHIMHADRI 
ಜಿಲ್ಲೆ

ಲಾರಿ ಹರಿದು ಆಟೋ ಚಾಲಕ ಸಾವು

Raichur - Reporter - Rachhai Swamy

ರಾಯಚೂರು ಲಾರಿ ಹರಿದು ಆಟೋ ಚಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಶಕ್ತಿನಗರ ಬಳಿ ಸೋಮವಾರ ನಡೆದಿದೆ. ಶಕ್ತಿನಗರದ ಲೇಬರ್ ಕಾಲೋನಿ ನಿವಾಸಿ ಸಿಂಹಾದ್ರಿ(35) ಮೃತ ಆಟೋ ಚಾಲಕ.

ಆಟೋ ಚಾಲಕನಾಗಿದ್ದ ಸಿಂಹಾದ್ರಿ ಅವರು ಅಪಘಾತದಲ್ಲಿ ರಸ್ತೆಗೆ ಬಿದ್ದಿದ್ದು, ಈ ವೇಳೆ ತಲೆ ಮೇಲೆಯೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆಯಲ್ಲಿ ಹಾರುಬೂದಿ ಟ್ಯಾಂಕರ್‌ಗಳು ಸೇರಿ ಭಾರೀ ವಾಹನಗಳ ಸಂಚಾರ ಹೆಚ್ಚಾಗಿದ್ದು, ಪ್ರಯಾಣಿಕರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ.

ಕೂಡಲೇ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ಭಾರೀ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಆಟೋ ಚಾಲಕರು, ಸ್ಥಳೀಯರು ಪ್ರತಿಭಟನೆ ನಡೆಸಿದರು.

ಈ ಕುರಿತು ಶಕ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.