ಜಿಲ್ಲೆ

ಆಟೋರಿಕ್ಷಾ ಬೈಕ್​ ನಡುವೆ ಡಿಕ್ಕಿ ಓರ್ವ ಸಾವು, ಮೂವರಿಗೆ ಗಾಯ

Haveri - Kariyappa Aralikatti

ಹಿರೇಕೆರೂರ: ಆಟೋರಿಕ್ಷಾ ಹಾಗೂ ಬೈಕ್​ ನಡುವೆ ಡಿಕ್ಕಿ ಸಂಭವಿಸಿ ಆಟೋದಲ್ಲಿದ್ದ ಓರ್ವ ಮೃತಪಟ್ಟು ಮೂವರು ಗಾಯಗೊಂಡ ಘಟನೆ ತಾಲೂಕಿನ ಚಿಕ್ಕೇರೂರ ರಸ್ತೆಯಲ್ಲಿ ಭಾನುವಾರ ನಡೆದಿದೆ.

ಪಟ್ಟಣದ ಜಾವಿದಖಾನ್​ ನಗರದ ಮುಬಾರಕ್​ ಅನ್ವರಅಹ್ಮದ ಮೇದೂರ ಮೃತನು. ದಾದಾಪೀರ ಆಬೀದಸಾಬ ಖತೀಬ, ಸಲ್ಮಾ ದಾದಾಪೀರ ಖತೀಬ, ಬೀಬಿಉಮೇರಾ ದಾದಾಪೀರ ಖತೀಬ ಗಾಯಗೊಂಡಿದ್ದು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಹಿರೇಕೆರೂರ ಪಟ್ಟಣದಿಂದ ಚಿಕ್ಕೇರೂರ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ಬೈಕ್​ ಹಾಗೂ ಆಟೋರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮುಬಾರಕ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.