ರಾಯಚೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹೊರಗುತ್ತಿಗೆ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಗಳು ಕಲಾವಿದರಿಂದ ಇಲಾಖೆಯ ಧನ ಸಹಾಯ ಪಡೆಯಲು 15 ಲಕ್ಷ ರೂ ಲಂಚ ಪಡೆದಿರುವ ಕುರಿತು ಹಿಂದಿನ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಅವರು ವರ್ಗಾವಣೆ ಪೂರ್ವದಲ್ಲಿ ಡಿಸಿಗೆ ಪತ್ರ ಬರದ ಬಳಿಕ ಇವರನ್ನು ಅಮಾನತ್ತು ಮಾಡಿದ್ದು, ಆದರೆ ಇದೀಗ ಸುಳ್ಳು ಆರೋಪವೆಂದು ಹೇಳಿ ಕಾರ್ಮಿಕ ಇಲಾಖೆಯಿಂದ ಬಾಕಿ ವೇತನ ಪಾವತಿಗೆ ಸೂಚಿಸಿದ್ದು, ಪ್ರಕರಣ ಸುಳ್ಳು ಎಂದು ಬಿಂಬಿಸಿದ್ದಾರೆಂದು ಅಹಿಂದ ಕಲಾವಿದರ ಒಕ್ಕೂಟದ ಸದಸ್ಯ ಅಲ್ತಾಫ್ ರಂಗಮಿತ್ರ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಜುಲೈನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹೊರ ಗುತ್ತಿಗೆ ಕೆಲಸ ಮಾಡುತ್ತಿದ್ದ ಶ್ರೀದೇವಿ ಮತ್ತು ಸಿದ್ದಪ್ಪ ಇವರು ಸರ್ಕಾರದ ಧನ ಸಹಾಯಕ್ಕಾಗಿ ಕಲಾವಿದರಿಂದ ಹಣ ಪಡೆದುಕೊಂಡಿದ್ದರು, ಈ ಬಗ್ಗೆ ದೂರು ನೀಡಿ ತನಿಖೆ ನಡೆಸಲಾಗಿತ್ತು, ಲಂಚ ಪಡೆದಿದ್ದು ಅಪರಾಧವಾಗಿದ್ದು ಪ್ರಕರಣ ಪೋಲಿಸ್ ಠಾಣೆಯಲ್ಲಿ ದೂರು ನೀಡಬಹುದಿತ್ತು, ಆದರೆ ದೂರು ನೀಡದೇ ಅವರನ್ನು ಕೆಲಸದಿಂದ ತೆಗೆಯಲಾಗಿದೆ, ಲಂಚ ಪಡೆದಿದ್ದಾರೆ ಎಂದು ಸುಳ್ಳು ಎಂದು ಹೇಳಿತ್ತಿದ್ದು ಆದರೆ 15 ಲಕ್ಷ ರೂ ಕಲಾವಿದರಿಂದ ಲಂಚ ಪಡೆದಿದ್ದಾರೆ ಡಿಸಿಗೆ ಪತ್ರ ಬರೆದ ಬಳಿಕ ತನಿಖೆ ನಡೆಸಲಾಗಿದೆ, ಸಹಾಯಕ ಅಧಿಕಾರಿ ಮೇಲೆ ಏಕೆ ಕ್ರಮವಿಲ್ಲ ಎಂದು ದೂರಿದರು.
ಈ ಹಿಂದಿನ ಸಹಾಯಕ ನಿರ್ದೇಶಕರು ಮಾಡಿದ ಆರೋಪವು ಸುಳ್ಳು ಎಂಬಂತೆ ಬಿಂಬಿಸಲು ಹೊರಟ್ಟಿದ್ದಾರೆ, ಇದೀಗ ಈ ಪ್ರಕರಣದ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಗೌಡ, ಬಸವರಾಜ ಇದ್ದರು.