ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ 
ಜಿಲ್ಲೆ

ಕಾಡಾನೆಗಳ ದಾಳಿಯ ಅನಾಹುತಕ್ಕೆ ಅಧಿಕಾರಿಗಳೇ ಹೊಣೆ

ನವೀನ ಬಿ.ಎಂ

ಶಿವಮೊಗ್ಗ: ಕಾಡಾನೆಗಳ ದಾಳಿಯಿಂದ ನೊಂದಿರುವ ರೈತರು ಭವಿಷ್ಯದಲ್ಲಿ ಸಾಲದ ಸುಳಿಗೆ ಸಿಲುಕಿ ಯಾವುದೇ ಅನಾಹುತ ಮಾಡಿಕೊಂಡರೂ ಅದಕ್ಕೆ ಅರಣ್ಯ ಇಲಾಖೆಯೇ ಕಾರಣವಾಗಿರಲಿದೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ ಎಚ್ಚರಿಕೆ ನೀಡಿದರು.

ಹೊಳೆಹೊನ್ನೂರು ರಸ್ತೆ ಶ್ರೀಗಂಧ ಕೋಠಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಶುಕ್ರವಾರ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರೈತರು ಎಂದರೆ ಅರಣ್ಯ ಇಲಾಖೆ ಸಿಬ್ಬಂದಿಗೂ ಅಲಕ್ಷೃವಾಗಿದೆ. ಈ ಸರ್ಕಾರಕ್ಕೆ ಆತ್ಮವೂ ಇಲ್ಲ. ಜನ, ರೈತಪರ ಕಾಳಜಿಯೂ ಇಲ್ಲ. ಆನೆಗಳ ಹಾವಳಿ ತಡೆಗೆ ಏನು ಕ್ರಮ ಕೈಗೊಂಡಿಲ್ಲ. ಸರ್ಕಾರ ಕಣ್ಮುಚ್ಚಿ ಕುಳಿತುಕೊಂಡಿದ್ದು ಆನೆಗಳನ್ನು ಪತ್ತೆ ಮಾಡಿ ಸ್ಥಳಾಂತರ ಮಾಡಬೇಕು. ರೈತರಿಗೆ ಆದ ನಷ್ಟವನ್ನು ಅರಣ್ಯ ಇಲಾಖೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.