ಲಿಂಗಸುಗೂರು ಎಸಿ ಅವಿನಾಶ ಸಿಂಧೆ ಅವರಿಗೆ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿದರು. ಪ್ರಮುಖರಾದ ಆದೇಶ ನಗನೂರು, ಬಸವರಾಜ ಬಡಿಗೇರ, ಚಿದಾನಂದ, ಸೋಮಶೇಖರ, ಬಸವರಾಜ ಕವಿತಾಳ, ಸುರೇಶ, ರಮೇಶ, ಶಿವರಾಜ, ಚಂದ್ರು, ಎಂ.ನಿಸರ್ಗ ಇತರರಿದ್ದರು. 
ಜಿಲ್ಲೆ

ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವಾಗಲಿ

ರುದ್ರಪ್ಪ ವಾಲಿ

ಲಿಂಗಸುಗೂರು: ತಾಲೂಕಿನ ಮುದಗಲ್ ಐತಿಹಾಸಿಕ ಕೋಟೆಯ ಕಂದಕದ ಗೋಡೆ ನೆಲಸಮಗೊಳಿಸಿದ ಪಪಂ ಮುಖ್ಯಾಧಿಕಾರಿ ಹಾಗೂ ಟೆಂಡರ್ ಪಡೆದ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ (ಆರ್‌ವೈಎಫ್‌ಒಐ) ದ ಮುಖಂಡರು ಎಸಿ ಅವಿನಾಶ ಸಿಂಧೆಗೆ ಬುಧವಾರ ಮನವಿ ಸಲ್ಲಿಸಿದರು.

ಮುದಗಲ್ ಮೊಹರಂ ಅಂಗವಾಗಿ ಪಪಂ ಸಿಒ ಅವರು ಕೋಟೆಯ ಕಂದಕದ ಗೋಡೆಯನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದಾರೆ. ಪ್ರಾಚ್ಯವಸ್ತು ಸಂಗ್ರಹ ಇಲಾಖೆ ಪರವಾನಗಿ ಪಡೆಯದೆ ಮೊಹರಂ ಹಬ್ಬದಲ್ಲಿ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಅನುಕೂಲವಾಗುವಂತೆ ಗುತ್ತಿಗೆ ನೀಡಲಾಗಿದೆ.

ಹೃದಯ ಭಾಗದಲ್ಲಿನ ಕೋಟೆಯ ಕಂದಕ ಮುಚ್ಚಿ ನಿಯಮ ಬಾಹಿರವಾಗಿ ಕಾನೂನು ಉಲ್ಲಂಘಿಸಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.