ಜಿಲ್ಲೆ

ವಾಚಾಮಗೋಚರ ಬೈದಿರುವ ಆಡಿಯೋ ಬಿಡುಗಡೆ

ರೇಷ್ಮೆ ನಗರ ಡೆಸ್ಕ್

ರಾಮನಗರ: ಚುನಾವಣೆಗೂ ಮೊದಲು ಡಿಕೆ ಸಹೋದರರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹಾದಿ ಬೀದಿಯಲ್ಲಿ ಬೈದಾಡಿಕೊಂಡಿದ್ದರು. ಈಗ ಪರಸ್ಪರ ಅಪ್ಪಿಕೊಂಡು ನಾಟಕ ವಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ.ಕುವಾರಸ್ವಾಮಿ, ಡಿಕೆ ಸುರೇಶ್ ಅವರು ಯೋಗೇಶ್ವರ್ ಅವರಿಗೆ ವಾಚಾಮಗೋಚರ ಬೈದಿರುವ ಆಡಿಯೋ ಬಿಡುಗಡೆ ವಾಡಿದರು.

ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರವಾಗಿ ಚನ್ನಪಟ್ಟಣದ ವಿರೂಪಾಕ್ಷಿಪುರ ಗ್ರಾಮದಲ್ಲಿ ವಾಧ್ಯಮಗಳ ಜತೆ ವಾತನಾಡಿದ ಅವರು, ಕಾಂಗ್ರೆಸ್ ಪ್ರಚಾರ ಸಭೆಗಳಲ್ಲಿ ವಿಧಾನಸಭೆಯಲ್ಲಿ ಚುನಾವಣಾ ವ್ಯವಸ್ಥೆ ಸುಧಾರಣೆ ಬಗ್ಗೆ ನಾನು ವಾತನಾಡಿರುವ ಆಡಿಯೋವನ್ನು ಎಷ್ಟುಬೇಕೋ ಅಷ್ಟು ಕತ್ತರಿಸಿ ಜನರಿಗೆ ಕೇಳಿಸುತ್ತಿದ್ದಾರೆ. ಆ ವ್ಯಕ್ತಿಗೆ ನಾನು ಹೇಳಲು ಇಚ್ಛಿಸುತ್ತೇನೆ, ನಾನು ವಾಡಿರುವ ಆಡಿಯೋ ಹತ್ತು ಹದಿನೈದು ನಿಮಿಷ ಇದೆ. ಅಷ್ಟನ್ನೂ ಕೇಳಿಸಲಿ ಎಂದು ಸವಾಲು ಹಾಕಿದರು.

ಆದರೆ, ಈ ಸುರೇಶ್ ಎಂತಹ ವ್ಯಕ್ತಿ ಎನುವುದಕ್ಕೆ ಇಲ್ಲಿದೆ ಆಡಿಯೋ. ದಿನ ಬೆಳಗ್ಗೆ ಯೋಗೇಶ್ವರ್ ಹೆಗಲ ಮೇಲೆ ಕೈ ಹಾಕಿಕೊಂಡು ತಿರುಗಾಡುವ ವ್ಯಕ್ತಿ, ಅವರ ಬಗ್ಗೆ ಹೇಗೆಲ್ಲಾ ವಾತನಾಡಿದ್ದಾರೆ ಎಂಬುದನ್ನು ನೋಡಿ ಎಂದು ವಾಧ್ಯಮಗಳ ಮುಂದೆ ಸುರೇಶ್ ವಾತನಾಡಿರುವ ಆಡಿಯೋವನ್ನು ಹಾಕಿ ಕೇಳಿಸಿದರು ಕೇಂದ್ರ ಸಚಿವರು.

ಕುಮಾರಸ್ವಾಮಿ ಅವರಿಗೆ ಮುಖಂಡರ ಹೆಸರೂ ಗೊತ್ತಿಲ್ಲ. ಅದಕ್ಕೆ ಬ್ರದರ್, ಬ್ರದರ್ ಎನ್ನುತ್ತಾರೆ ಎಂದು ಡಿ. ಕೆ. ಸುರೇಶ್ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಅಯ್ಯೋ.. ನಾನು ಎಲ್ಲರನ್ನೂ ಬ್ರದರ್ ಅಂತಲೇ ಕರೆಯುತ್ತೇನೆ. ಅದರಲ್ಲೇನಿದೆ? ಎಂದರು.

ಇವರೇನು, ಇವರ ಅಸಲಿ ಬಂಡವಾಳ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾನು ಹೇಳಬೇಕಿಲ್ಲ, ಚನ್ನಪಟ್ಟಣ ಜನರೇ ಉತ್ತರ ಕೊಡುತ್ತಾರೆ, ಅಭಿವೃದ್ಧಿ ಬಗ್ಗೆ ನಿಖಿಲ್ ಅವರಿಂದಲೇ ಚರ್ಚೆ ಮಾಡಿಸುತ್ತೇನೆ ಎಂದು ಸವಾಲು ಹಾಕಿದರು.

ಕುವಾರಸ್ವಾಮಿ ಗುರಿ ಅಭಿವೃದ್ಧಿ ಅಲ್ಲ, ಸರ್ಕಾರ ಬೀಳಿಸೋದು ಎಂಬ ಕೃಷ್ಣ ಬೈರೇಗೌಡ ಹೇಳಿಕೆಗೆ ಖಡಕ್ ಉತ್ತರ ಕೊಟ್ಟ ಕುವಾರಸ್ವಾಮಿ, ಜನರ ಆಶೀರ್ವಾದದಿಂದ ನಿಖಿಲ್ ಶಾಸಕರಾಗಿ ಆಯ್ಕೆ ಆಗುವುದು ಖಚಿತ. ಅವರು ವಿಧಾನಸೌಧಕ್ಕೆ ಹೋಗಿಯೇ ಹೋಗ್ತಾರೆ. ವಿಧಾನಸಭೆಯಲ್ಲಿ ಅಭಿವೃದ್ಧಿ ಎಂದರೇನು ಎಂದು ನಿಖಿಲ್ ಅವರೇ ವಿಧಾನಸಭಾ ಕಲಾಪದಲ್ಲಿ ರೂಲ್ 69ರ ಅಡಿಯಲ್ಲಿ ಚರ್ಚೆ ವಾಡುತ್ತಾರೆ. ಇವರ ಎಲ್ಲ ಟೀಕೆಗೂ ನಿಖಿಲ್ ವಿಧಾನಸಭೆಗೆ ಪ್ರವೇಶ ವಾಡಿ ಉತ್ತರ ಕೊಡುತ್ತಾರೆ ಎಂದರು.

ಚನ್ನಪಟ್ಟಣ ಸಿಎಂ ಏನು ಕೊಡುತ್ತಾರೆ?

ಸಿಎಂ, ಡಿಸಿಎಂ ಸೇರಿ ಹಲವು ಮಂತ್ರಿಗಳು ಚನ್ನಪಟ್ಟಣಕ್ಕೆ ಬಂದು ಭಾಷಣ ವಾಡಿದ್ದಾರೆ. ನಿನ್ನೆ ಸಿಎಂ ಭಾಷಣದಲ್ಲಿ ಚನ್ನಪಟ್ಟಣಕ್ಕೆ ಏನು ಕೊಡ್ತೀವಿ ಅನ್ನೋದೇ ಇಲ್ಲ. ದೇವೇಗೌಡರು, ನಿಖಿಲ್ ಹಾಗೂ ನನ್ನ ಬಗ್ಗೆ ವೈಯಕ್ತಿಕ ಟೀಕೆ ವಾಡಿದ್ದಾರೆ. ಕೇವಲ ನಮ್ಮನ್ನು ಬೈದುಕೊಂಡು ಹೋದರೆ ವೋಟು ಸಿಗುತ್ತದೆ ಎಂಬುದು ಅವರ ಭಾವನೆ ಎಂದು ಟೀಕಿಸಿದರು. ಇನ್ನೂ ಕೆಲ ಮಂತ್ರಿಗಳು ಎಚ್ಡಿಕೆ ಚನ್ನಪಟ್ಟಣಕ್ಕೆ ಏನು ವಾಡಿದ್ದಾರೆ ಎಂದು ಕೇಳುತ್ತಾರೆ. ಅಭಿವೃದ್ಧಿ ಅಂದರೆ ಏನು, ಚನ್ನಪಟ್ಟಣ ಸುತ್ತುತ್ತಾ ಇದ್ದೀರಲ್ಲ. ನಿಮ್ಮ ಕ್ಷೇತ್ರದ ರಸ್ತೆ, ಕ್ಷೇತ್ರದ ಗ್ರಾಮಗಳ ಪರಿಸ್ಥಿತಿ ನೋಡಿದ್ದೀರಾ? ಕಮಿಷನ್ ಹೊಡೆಯೋದೆ ನಿಮ್ಮ ಪ್ರಕಾರ ಅಭಿವೃದ್ಧಿಯಾ? ಇವರ ಹೇಳಿಕೆ ನೋಡ್ತಿದ್ರೆ ಅಭಿವೃದ್ಧಿ ಪದದ ಬಗ್ಗೆ ಗೊಂದಲ ಆಗ್ತಿದೆ ಎಂದು ಕೇಂದ್ರ ಸಚಿವರು ಕುಟುಕಿದರು.

ರಮೇಶ್ ಕುವಾರ್ ಭೂ ಒತ್ತುವರಿ ತೆರವು ವಾಡಿ

ನಿಮ್ಮ ಪಕ್ಷದ ನಾಯಕ, ವಾಜಿ ಸ್ಪೀಕರ್ ಅವರು ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ವಾಡಿದ್ದಾರೆ. ನಿನಗೆ ದಮ್ಮು,ತಾಕತ್ತು ಇದ್ದರೆ ಮೊದಲು ಅದನ್ನು ತೆರವು ವಾಡಿಸಿ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಎಚ್‌ಡಿಕೆ ಸವಾಲು ಹಾಕಿದರು.

ನಿಮ್ಮ ಗುರುಗಳು ಎನ್ನುವ ವ್ಯಕ್ತಿ ಅರಣ್ಯ ಇಲಾಖೆಗೆ ಸೇರಿದ 120 ಎಕರೆ ಲಪಟಾಯಿಸಿದ್ದಾರೆ. ಪೊಗರುದಸ್ತಾಗಿದ್ದಾರಲ್ಲ ಅವರು ಶ್ರೀನಿವಾಸಪುರದಲ್ಲಿ. ಕೇಂದ್ರ ಅರಣ್ಯ ಇಲಾಖೆ ಕೊಟ್ಟಿರುವ ನೋಟೀಸ್ ನೋಡಿದ್ದೀರಾ?

ರೈತರನ್ನು ಒಕ್ಕಲೆಬ್ಬಿಸುತ್ತೀರಿ, ಒಂದೂ ರಸ್ತೆ ವಾಡಲು ಬಿಡಲ್ಲ ನೀವು. ಇದೇನಾ ಅಭಿವೃದ್ಧಿ? ಎಂದು ಕೃಷ್ಣ ಭೈರೇಗೌಡ ವಿರುದ್ಧ ಕಿಡಿಕಾರಿದರು.