ಜಿಲ್ಲೆ

ಮಳಿಗೆಗಳ ಹರಾಜಿನಲ್ಲಿ 97 ಸಾವಿರ ರೂ. ಹೆಚ್ಚುವರಿ ಲಾಭ

ಕಿರಣ್ ಗೌಡ.ಜಿ

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ 2025-26ನೇ ಸಾಲಿನ ಕುರಿ, ಕೋಳಿ, ಹಸಿ ಮೀನು, ಹಂದಿ ಮಾಂಸದ ಮಳಿಗೆಗಳು ಮತ್ತು ಸಂತೆ ಸುಂಕ ಎತ್ತಾವಳಿ ಹರಾಜು ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಎಲ್ಲ ಮಳಿಗೆಗಳು ಸೇರಿದಂತೆ ಒಟ್ಟು ರೂ. 22.45 ಲಕ್ಷ ರೂ.ಗಳಿಗೆ ಹರಾಜಾಗುವ ಮೂಲಕ, ಕಳೆದ ಸಾಲಿಗಿಂತಲೂ ಹೆಚ್ಚುವರಿಯಾಗಿ 97 ಸಾವಿರ ರೂ.ಗಳಷ್ಟು ಹೆಚ್ಚಿನ ಲಾಭವಾಯಿತು. ಕೋಳಿ ಮಾಂಸದ ಮಳಿಗೆ 5.86 ಲಕ್ಷ ರೂ.ಗಳಿಗೆ ಹರಾಜು ಆಯಿತು. ಕಳೆದ ಸಾಲಿನಲ್ಲಿ ರೂ. 5.12 ಲಕ್ಷ ರೂ.ಗಳಿಗೆ ಹರಾಜಾಗಿತ್ತು. ಕುರಿ ಮಾಂಸದ ಮಳಿಗೆ 2.31 ಲಕ್ಷ ರೂ.ಗಳಿಗೆ ಹರಾಜಾಯಿತು. ಕಳೆದ ಸಾಲಿನಲ್ಲಿ ರೂ. 2.21 ಲಕ್ಷ ರೂ.ಗಳಿಗೆ ಹರಾಜಾಗಿತ್ತು. ಹಸಿ ಮೀನು ಮಳಿಗೆ 4.26 ಲಕ್ಷಕ್ಕೆ ಹರಾಜಾಯಿತು. ಕಳೆದ ಸಾಲಿನಲ್ಲಿ ರೂ. 4.20 ರೂ.ಗಳಿಗೆ ಹರಾಜಾಗಿತ್ತು.

ಸಂತೆ ಸುಂಕ 9.50 ಲಕ್ಷ ರೂ.ಗಳಿಗೆ ಹರಾಜಾಯಿತು. ಕಳೆದ ಸಾಲಿನಲ್ಲಿ ರೂ. 9.45 ಲಕ್ಷ ರೂ. ಸಿಕ್ಕಿತ್ತು. ಖಾಸಗಿ ಬಸ್ ನಿಲ್ದಾಣದ ಸುಂಕ 52 ಸಾವಿರ ರೂ. ಗಳಿಗೆ ಹರಾಜಾಯಿತು. ಕಳೆದ ಸಾಲಿನಲ್ಲಿ 50 ಸಾವಿರ ರೂ., ಆದಾಯ ಸಿಕ್ಕಿತ್ತು. ಹಂದಿ ಮಾಂಸದ ಮಾರುಕಟ್ಟೆಗೆ ಸೂಕ್ತ ದರ ದೊರಕದ ಹಿನ್ನೆಲೆಯಲ್ಲಿ ಹರಾಜು ಮುಂದೂಡಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮಹೇಶ್, ಪಂಚಾಯಿತಿ ಸದಸ್ಯರಾದ ಬಿ.ಸಂಜೀವ, ಪಿ.ಕೆ.ಚಂದ್ರು, ಶುಭಕರ, ಎಚ್.ಎ.ನಾಗರಾಜು, ವಿನಯ್, ಶೀಲಾ ಡಿಸೋಜ, ಮೃತ್ಯುಂಜಯ, ಡಿ.ಯು. ಕಿರಣ್ ಹಾಗೂ ಮುಖ್ಯಾಧಿಕಾರಿ ಸತೀಶ್ ಇದ್ದರು.