ತಿಪಟೂರು/ತುಮಕೂರು: ನೀರಾವರಿ ಯೋಜನೆ ಸಾಕಾರಕ್ಕೆ ಆಗ್ರಹಿಸಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವುದು ರಾಜಕೀಯ ಪಿತೂರಿಯಾಗಿದ್ದು, ಗ್ರಾಮಸ್ಥರು ಎಚ್ಚರಿಕೆವಹಿಸಬೇಕು ಎಂದು ಗುರುವಾರ ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. 14 ಸದಸ್ಯ ಬಲದ ಹೊನ್ನವಳ್ಳಿ ಗ್ರಾಪಂನಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಗುರುವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ, ನಗರದ ಎಪಿಎಂಸಿ ಸಭಾಂಗಣದಲ್ಲಿ ಬಿಜೆಪಿ ಮುಖಂಡ ಗಂಗಾಧರ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಶಾಸಕ ಬಿ.ಸಿ. ನಾಗೇಶ್ ಹೊನ್ನವಳ್ಳಿ ಭಾಗದ 24 ಕೆರೆಗಳಿಗೆ ನೀರು ಹರಿಸಲು 2009ರಲ್ಲಿ ಮಂಜೂರಾತಿ ಕೊಡಿಸಿದ್ದು 93.2 ಎಂಸಿಎಫ್‌ಟಿ ನೀರು ವೈಜ್ಞಾನಿಕವಾಗಿ ಸಾಕಾಗಲ್ಲ. ಕನಿಷ್ಠ ಶೇ.60 ನೀರು ಹರಿಸಲು ಹೆಚ್ಚುವರಿಯಾಗಿ 220 ಎಂಸಿಎಫ್‌ಟಿ ನೀರು ಬೇಕೆಬೇಕೆಂದು ಕಾವೇರಿ ನೀರಾವರಿ ನಿಗಮಕ್ಕೆ ಮನವರಿಕೆ ಮಾಡಿದ್ದಾರೆ ಎಂದರು.
2019ರಲ್ಲಿ ಕೇಂದ್ರ ಸರ್ಕಾರ ತಿಪಟೂರು ತಾಲೂಕನ್ನು ಡಾರ್ಕ್ ಏರಿಯಾ ಎಂದು ಘೋಷಿಸಿದ ಪರಿಣಾಮ ಯಡಿಯೂರಪ್ಪನವರ ಅಂದಿನ ಸರ್ಕಾರ ಹೊನ್ನವಳ್ಳಿ ಏತ ನೀರಾವರಿಗೆ ಅಗತ್ಯವಿದ್ದ ಹೆಚ್ಚುವರಿ ನೀರನ್ನು ಮಂಜೂರು ಮಾಡಿದ್ದು ಹೊಸ ಡಿಪಿಆರ್ ಪ್ರಕಾರ ಮುಂದಿನ ತಿಂಗಳಿನಿಂದ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದು ಭರವಸೆ ನೀಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಬಳ್ಳೇಕಟ್ಟೆ ಸುರೇಶ್, ಎಪಿಎಂಸಿ ಅಧ್ಯಕ್ಷ ಎಚ್.ಬಿ.ದಿವಾಕರ್ ಮುಖಂಡರಾದ ಸಿಂಗ್ರಿ ದತ್ತ ಪ್ರಸಾದ್, ಬಿಸಲೇಹಳ್ಳಿ ಜಗದೀಶ್ ಇದ್ದರು.
ಚು ಚುನಾವಣೆ ಬಹಿಷ್ಕಾರಕ್ಕೆ ರಾಜಕೀಯ ಪಿತೂರಿ ೆ ಬಹಿಷ್ಕಾರಕ್ಕೆ ರಾಜಕೀಯ ಪಿತೂರಿ ತಿಪಟೂರು/ತುಮಕೂರು: ನೀರಾವರಿ ಯೋಜನೆ ಸಾಕಾರಕ್ಕೆ ಆಗ್ರಹಿಸಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವುದು ರಾಜಕೀಯ ಪಿತೂರಿಯಾಗಿದ್ದು, ಗ್ರಾಮಸ್ಥರು ಎಚ್ಚರಿಕೆವಹಿಸಬೇಕು ಎಂದು ಗುರುವಾರ ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. 14 ಸದಸ್ಯ ಬಲದ ಹೊನ್ನವಳ್ಳಿ ಗ್ರಾಪಂನಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಗುರುವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ, ನಗರದ ಎಪಿಎಂಸಿ ಸಭಾಂಗಣದಲ್ಲಿ ಬಿಜೆಪಿ ಮುಖಂಡ ಗಂಗಾಧರ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಶಾಸಕ ಬಿ.ಸಿ. ನಾಗೇಶ್ ಹೊನ್ನವಳ್ಳಿ ಭಾಗದ 24 ಕೆರೆಗಳಿಗೆ ನೀರು ಹರಿಸಲು 2009ರಲ್ಲಿ ಮಂಜೂರಾತಿ ಕೊಡಿಸಿದ್ದು 93.2 ಎಂಸಿಎಫ್‌ಟಿ ನೀರು ವೈಜ್ಞಾನಿಕವಾಗಿ ಸಾಕಾಗಲ್ಲ. ಕನಿಷ್ಠ ಶೇ.60 ನೀರು ಹರಿಸಲು ಹೆಚ್ಚುವರಿಯಾಗಿ 220 ಎಂಸಿಎಫ್‌ಟಿ ನೀರು ಬೇಕೆಬೇಕೆಂದು ಕಾವೇರಿ ನೀರಾವರಿ ನಿಗಮಕ್ಕೆ ಮನವರಿಕೆ ಮಾಡಿದ್ದಾರೆ ಎಂದರು. 2019ರಲ್ಲಿ ಕೇಂದ್ರ ಸರ್ಕಾರ ತಿಪಟೂರು ತಾಲೂಕನ್ನು ಡಾರ್ಕ್ ಏರಿಯಾ ಎಂದು ಘೋಷಿಸಿದ ಪರಿಣಾಮ ಯಡಿಯೂರಪ್ಪನವರ ಅಂದಿನ ಸರ್ಕಾರ ಹೊನ್ನವಳ್ಳಿ ಏತ ನೀರಾವರಿಗೆ ಅಗತ್ಯವಿದ್ದ ಹೆಚ್ಚುವರಿ ನೀರನ್ನು ಮಂಜೂರು ಮಾಡಿದ್ದು ಹೊಸ ಡಿಪಿಆರ್ ಪ್ರಕಾರ ಮುಂದಿನ ತಿಂಗಳಿನಿಂದ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದು ಭರವಸೆ ನೀಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಬಳ್ಳೇಕಟ್ಟೆ ಸುರೇಶ್, ಎಪಿಎಂಸಿ ಅಧ್ಯಕ್ಷ ಎಚ್.ಬಿ.ದಿವಾಕರ್ ಮುಖಂಡರಾದ ಸಿಂಗ್ರಿ ದತ್ತ ಪ್ರಸಾದ್, ಬಿಸಲೇಹಳ್ಳಿ ಜಗದೀಶ್ ಇದ್ದರು.
ಮದ್ಯ ಮಾರಾಟ ನಿಷೇಧಕ್ಕೆ ಡಿಸಿ ಆದೇಶ: ತುಮಕೂರು: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತದಾನ ಮುಗಿಯುವ ಸಮಯಕ್ಕೆ 48 ಗಂಟೆಗಳ ಮುಂಚಿತವಾಗಿ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮದ್ಯದಂಗಡಿ ಹಾಗೂ ತಯಾರಿಕಾ ಘಟಕ ಮುಚ್ಚಲು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಆದೇಶಿಸಿದ್ದಾರೆ. ಡಿ.22ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಡಿ.20ರ ಸಂಜೆ 5ರಿಂದ 22ರ ಸಂಜೆ 5ರವರೆಗೆ ಹಾಗೂ ಡಿ.27ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಡಿ.25ರ ಸಂಜೆ 5ರಿಂದ 27ರ ಸಂಜೆ 5ರ ವರೆಗೆ ಎಲ್ಲ ಮದ್ಯದಂಡಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕ ಮುಚ್ಚಲು ಸೂಚಿಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯ ಸ್ವಾಧೀನದಲ್ಲಿಟ್ಟುಕೊಳ್ಳುವುದು ಅಥವಾ ಮದ್ಯ ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುವುದು ಕಂಡು ಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ಪೊಲೀಸ್ ಕಸ್ಟಡಿಯಲ್ಲಿ ಇಡಲಾಗುವುದು ಎಂದು ಎಚ್ಚರಿಸಿದ್ದಾರೆ.