ಜಿಲ್ಲೆ

ಅಧಿವೇಶನದಲ್ಲಿ ಗಮನ ಸೆಳೆಯುವೆ

ಮರಿದೇವ ಹೂಗಾರ

ಹುಬ್ಬಳ್ಳಿ: ಪೊಲೀಸರ ವೈಫಲ್ಯದಿಂದ ಅಂಜಲಿ ಅಂಬಿಗೇರ ಹತ್ಯೆಯಾಗಿದೆ. ಹು-ಧಾ ಅವಳಿ ನಗರದಲ್ಲಿ ಪೊಲೀಸರ ಲೋಪ ಎದ್ದು ಕಾಣುತ್ತಿದೆ. ಈ ಕುರಿತು ಅಧಿವೇಶನದಲ್ಲಿ ಗಮನ ಸೆಳೆಯುವೆ ಎಂದು ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.
ನಗರದಲ್ಲಿ ಹತ್ಯೆಯಾದ ಅಂಜಲಿ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಒಂದು ಲಕ್ಷ ರೂ. ಚೆಕ್ ಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ದೂರು ಸ್ವೀಕರಿಸಿದ್ದರೆ ಅಂಜಲಿ ಹತ್ಯೆ ಆಗುತ್ತಿರಲಿಲ್ಲ. ಈಗಾಗಲೇ ಈ ಪ್ರಕರಣವನ್ನು ಸಿಐಡಿಗೆ ವಹಿಸಿರುವುದಕ್ಕೆ ಗೃಹ ಮಂತ್ರಿಗಳನ್ನು ನಾನು ಗೌರವಿಸುತ್ತೇನೆ ಎಂದರು.
ಅಂಬಿಗೇರ ಸಮಾಜದ ಅಧ್ಯಕ್ಷ ನಿಂಗಣ್ಣ ಸೋಮನೂರ, ಅರ್ಜುನ ಜಮಾದಾರ ಇತರರು ಇದ್ದರು.