ಜಿಲ್ಲೆ

ಚಿನ್ನಾಭರಣಗಳ ಮೇಲೆ ಆಕರ್ಷಕ ರಿಯಾಯಿತಿ: ಜೋಯಾಲುಕ್ಕಾಸ್ ಘೋಷಣೆ

ಬೆಂಗಳೂರು: ಆಭರಣ ತಯಾರಿಕೆ, ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಜೋಯಾಲುಕ್ಕಾಸ್, ಚಿನ್ನಾಭರಣ ಖರೀದಿ ಮೇಲೆ ಆಕರ್ಷಕ ಕೊಡುಗೆಯನ್ನು ಘೋಷಿಸಿದೆ.

ಅ.5ರವರೆಗೆ ಈ ಆರ್ ಇರಲಿದೆ. ಚಿನ್ನ, ಕತ್ತರಿಸಿದ ಮತ್ತು ಕತ್ತರಿಸದ ವಜ್ರ, ಪ್ಲಾಟಿನಂ, ಬೆಳ್ಳಿ, ಹರಳಿನ ಅಭರಣಗಳ ಮಜೂರಿ ಮೇಲೆ ಶೇ.50 ರಿಯಾಯಿತಿ ದೊರೆಯಲಿದೆ. ಜೋಯಾಲುಕ್ಕಾಸ್ ಮಳಿಗೆಯಲ್ಲಿ ಲಕ್ಷಾಂತರ ವಿನ್ಯಾಸದ ಚಿನ್ನಾಭರಣಗಳು ನೋಡುಗರ ಗಮನ ಸೆಳೆಯುತ್ತಿದೆ.

ಜೋಯಾಲುಕ್ಕಾಸ್ ಸಮೂಹ ಅಧ್ಯಕ್ಷ ಡಾ.ಜೋಯ್ ಆಲುಕ್ಕಾಸ್ ಮಾತನಾಡಿ, ಗ್ರಾಹಕರು ಅನುಕೂಲವಾಗುವ ದೃಷ್ಟಿಯಿಂದ ಈ ಆರ್‌ನ್ನು ಘೋಷಿಸಲಾಗಿದೆ. ಇದನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು. ಮೌಲ್ಯ, ಗುಣಮಟ್ಟ ಮತ್ತು ವಿನ್ಯಾಸದ ವೈವಿಧ್ಯತೆ ನೀಡುತ್ತಿದ್ದೇವೆ. ವರ್ಷದ ಅತಿದೊಡ್ಡ ಆಭರಣ ಮಾರಾಟವು ನಮ್ಮ ಎಲ್ಲ ಮಳಿಗೆಗಳಲ್ಲಿ ದೊರೆಯಲಿವೆ. ಈ ವಿಶೇಷ ಕೊಡುಗೆ ಜೊತೆಗೆ ಅಜೀವಪರ್ಯಂತ ಉಚಿತ ನಿರ್ವಹಣೆ, ಒಂದು ವರ್ಷದ ಉಚಿತ ವಿಮೆ ಮತ್ತು ಪ್ರತಿ ಖರೀದಿಯೊಂದಿಗೆ ಮರು ಖರೀದಿ ಖಾತರಿ ಸಹ ನೀಡುತ್ತಿದ್ದೇವೆ ಎಂದರು.