ಜಿಲ್ಲೆ

ಗುರುವಾರದಿಂದ ಅತ್ತಿಗುಪ್ಪೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಬೆಂಗಳೂರು: ವಿಜಯನಗರ ಬಡಾವಣೆಯ ಅತ್ತಿಗುಪ್ಪೆಯ ಪುರಾತನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಕಾರ್ಯಕ್ರಮ ನಾಳೆ (ಗುರುವಾರ) ನಡೆಯಲಿದೆ.

ಪಾಲ್ಗುಣ ಶುದ್ಧ ಚತುರ್ದಶಿಯ ಅಪರಾಹ್ನ 12.30ಕ್ಕೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಕಾರ್ಯಕ್ರಮದ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಅಂದು ಸಂಜೆ ರಥಾವರೊಹಣ, ಮಣೀವು ಸೇವೆ, ರಾತ್ರಿ ಹೂವಿನ ಪಲ್ಲಕ್ಕಿ ಉತ್ಸವಗಳು ಜರುಗಲಿವೆ.

ಶುಕ್ರವಾರದಂದು ಹುಣ್ಣಿಮೆಯ ದಿವಸ ಪ್ರಾತಃಕಾಲ 5 ಗಂಟೆಯಿಂದ ಅಖಂಡ ದೀಪ ಸೇವೆ, ರಾತ್ರಿ ಮುತ್ತಿನ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ.

ಶ್ರೀಮತ್ಪಾಂಚರಾತ್ರಾಗಮೋ ಪದ್ಧತಿಯಂತೆ ನಡೆಯಲಿರುವ ಬ್ರಹ್ಮರಥೋತ್ಸವದ ವಿವಿಧ ಕಾರ್ಯಕ್ರಮಗಳು ಮಾ.17 ರಂದು ಮುಕ್ತಾಯವಾಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯ ಟ್ರಸ್ಟ್ ಸಾರ್ವಜನಿಕರಲ್ಲಿ ವಿನಂತಿಸಿದೆ.