ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಆಶ್ರಯದಲ್ಲಿ ನಡೆದ 21ನೇ ವರ್ಷದ ಮೊಸರು ಕುಡಿಕೆ ಉತ್ಸವ ನೆರವೇರಿತು.
ಅಟ್ಟಿ ಮಡಕೆ ಒಡೆಯುವ ಸ್ಪರ್ಧೆಯನ್ನು ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು. ಶ್ರೀ ಕ್ಷೇತ್ರದ ಬೈಪಾಸ್ ರಸ್ತೆಯ 8 ಕಡೆಗಳಲ್ಲಿ ಅಟ್ಟಿ ಮಡಕೆಗಳನ್ನು ಕಟ್ಟಲಾಗಿತ್ತು. ರಥಬೀದಿ ಸರ್ಕಲ್‌ನಲ್ಲಿ ಕೂಡಾ ಅಟ್ಟಿ ಮಡಕೆ ಕಟ್ಟಲಾಗಿತ್ತು. ಇದನ್ನು ಸುಮಾರು 8 ತಂಡಗಳ ಯುವಕರು ಸಾಹಸಮಯವಾಗಿ ಒಡೆದರು. ಪ್ರಥಮ ಸ್ಥಾನವನ್ನು ಜವನೆರ್ ಬುಡೇರಿಯಾ ಪಡೆದರೆ, ದ್ವಿತೀಯ ಮತ್ತು ತೃತೀಯ ಮತ್ತು ಚತುರ್ಥ ಬಹುಮಾನವನ್ನು ಕ್ರಮವಾಗಿ ಸಿದ್ಧಿವಿನಾಯಕ ದೊಡ್ಡಕೊಪ್ಪ, ವಿಷ್ಣು ್ರೆಂಡ್ಸ್, ವೀರ ಸಾರ್ವಕರ್ ತಂಡಗಳು ಪಡೆದುಕೊಂಡಿತು.
150ಕ್ಕೂ ಅಧಿಕ ಪುಟಾಣಿಗಳು ಕೃಷ್ಣವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡರು. ದಿಯಾನ್ ಪರ್ವತಮುಖಿ, ವಾಗ್ಮಿ ಶೆಟ್ಟಿ, ಶರ್ವಾಣಿ, ಆತ್ವಿಕ್ ಕಾಮತ್ ಕ್ರಮವಾಗಿ 4 ವಿಭಾಗದಲ್ಲಿ ಮುದ್ದುಕೃಷ್ಣರಾಗಿ ಆಯ್ಕೆಯಾದರು.
ಲಯನ್ಸ್ ಅಧ್ಯಕ್ಷೆ ವಿಮಲಾ ರಂಗಯ್ಯ, ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಮಾನಾಡು, ಶ್ರೀಧರ್ ಗುತ್ತಿಗಾರು, ಕಾರ್ಯದರ್ಶಿ ನಿತಿನ್ ಭಟ್, ಕೋಶಾಧಿಕಾರಿ ಹರ್ಷಿತ್ ನೂಚಿಲ, ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್., ದಶಮಾನೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಎನ್.ಎಸ್., ಪೂರ್ವಾಧ್ಯಕ್ಷರಾದ ಲೋಕೇಶ ಬಿ.ಎನ್., ದೀಪಕ್ ನಂಬಿಯಾರ್, ವೆಂಕಟೇಶ್ ಎಚ್.ಎಲ್., ಶ್ರೀಕೃಷ್ಣ ಶರ್ಮ, ಲೋಕೇಶ್ ಎನ್.ಎಸ್., ಪ್ರಮುಖರಾದ ಉದಯ ನೂಚಿಲ, ದಿನೇಶ್ ಮೊಗ್ರ ಮೊದಲಾದವರಿದ್ದರು.
ಸಮಿತಿ ಪೂರ್ವಾಧ್ಯಕ್ಷ ಡಾ.ಸಿದ್ದಲಿಂಗ ನಿರೂಪಿಸಿದರು