ಸವದತ್ತಿ: ರಾಷ್ಟ್ರೀಯ ಸ್ವಯಂಸೇವಾ ಸಂಘದ ಶತಮಾನೋತ್ಸವ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಭಾನುವಾರ ಪಥಸಂಚಲನ ಜರುಗಿತು.
ರಾಷ್ಟ್ರೀಯ ಸ್ವಯಂಸೇವಾ ಸಂಘಗಳ ಪ್ರಮುಖರು ಹಾಗೂ ಸ್ವಯಂಸೇವಕರು ನಗರದ ಎಪಿಎಂಸಿ ವೃತ್ತದಲ್ಲಿ ಸಮಾವೇಶಗೊಂಡರು. ನಾಡದೇವಿ ಭುವನೇಶ್ವರಿ ಮತ್ತು ಆರ್‌ಎಸ್‌ಎಸ್ ಸಂಸ್ಥಾಪಕರ ಭಾವಚಿತ್ರಗಳನ್ನು ತೆರೆದ ವಾಹನದಲ್ಲಿರಿಸಿ ಮಾರ್ಲಾಪಣೆ ಮಾಡಿ, ಆರ್‌ಎಸ್‌ಎಸ್ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸಲ್ಲಿಸಲಾಯಿತು.
ಹೊಸಪೇಟ ಓಣಿ, ಹಳೇ ಬಸ್ ನಿಲ್ದಾಣ, ಆನಿ ಅಗಸಿ, ಗಾಂಧಿ ಚೌಕ್, ಸಂಗೊಳ್ಳಿ ರಾಯಣ್ಣ ವೃತ್ತ, ಎಸ್‌ಎಲ್‌ಎಒ ಕ್ರಾಸ್, ಪಟ್ಟಣಶೆಟ್ಟಿ ಪಟ್ರೋಲ್ ಬಂಕ್, ಹನಮಂತದೇವರ ದೇವಸ್ಥಾನ, ಕಾತ್ರಾಳ ಓಣಿ ಸೇರಿ ವಿವಿಧೆಡೆ ಪಥಸಂಚಲನ ಸಂಚರಿಸಿ, ತಾಲೂಕು ಕ್ರೀಡಾಂಗಣ ತಲುಪಿ ಸಮಾರೋಪಗೊಂಡಿತು.
ಆರ್‌ಎಸ್‌ಎಸ್ ಪಥಸಂಚಲನಕ್ಕೆ ವಿವಿಧೆಡೆಯಿಂದ ಗಣವೇಷಧಾರಿಗಳು ಆಗಮಿಸಿದ್ದರು. ಗಣವೇಷಧಾರಿಗಳನ್ನು ಜನರು ಪುಷ್ಪವೃಷ್ಟಿ ಮೂಲಕ ಸ್ವಾಗತಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ, ರತ್ನಾ ಮಾಮನಿ, ಡಾ.ಅಭಿನಂದನ ಕಬ್ಬಿಣ, ನರಸಿಂಹ ಕುಲಕರ್ಣಿ, ಸಂಜೀವಕುಮಾರ ನವಲಗುಂದ, ಕುಮಾರಸ್ವಾಮಿ ತಲ್ಲೂರಮಠ, ಡಾ.ಹೇಮಂತ ಭಸ್ಮೆ, ಸಿ.ಬಿ.ದೊಡ್ಡಗೌಡರ, ಆರ್.ಎಸ್.ದೊಡ್ಡಗೌಡರ, ಶಂಕರ ಕುಲಕರ್ಣಿ ಇತರರಿದ್ದರು.