ಆರ್‌ಎಸ್‌ಎಸ್ ಶತಾಬ್ದಿ ನಿಮಿತ್ತ ಮಸ್ಕಿಯಲ್ಲಿ ಗಣವೇಷಧಾರಿಗಳು ಪಥಸಂಚಲನ ನಡೆಸಿದರು. 
ಜಿಲ್ಲೆ

ಗಮನ ಸೆಳೆದ ಗಣವೇಷಧಾರಿಗಳ ಪಥಸಂಚಲನ

ಮಸ್ಕಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಪ್ರಯುಕ್ತ ಪಟ್ಟಣದಲ್ಲಿ ಶನಿವಾರ ನೂರಾರು ಗಣವೇಷಧಾರಿಗಳು ಪಥಸಂಚಲನ ನಡೆಸಿದರು.

ನರಸನಗೌಡ ಶಾಲೆಯ ಆವರಣದಿಂದ ಆರಂಭವಾದ ಪಥಸಂಚಲನ ಉಪ್ಪಲದೊಡ್ಡಿ, ಜೋಗಿನರ ಓಣಿ, ಬನ್ನಿಕಟ್ಟೆ, ಮಾಲಿಗೌಡ್ರ ಮನೆ ಮುಂಭಾಗದಿಂದ ಸಂತೆ ಬಜಾರ್, ಅಗಸಿ, ಅಶೋಕ ವೃತ್ತ, ಚನ್ನಮ್ಮ ವೃತ್ತ, ದಿವಟರ್ ದವಾಖಾನೆ, ಬಾಳೆಕಾಯಿ ಓಣಿ, ದೈವದ ಕಟ್ಟೆ ಮುಖಾಂತರ ಮರಳಿ ನರಸನಗೌಡ ಶಾಲೆಗೆ ಆಗಮಿಸಿ ಮುಕ್ತಾಯಗೊಂಡಿತು.

ದಾರಿಯುದ್ದಕ್ಕೂ ಮನೆಯ ಅಂಗಳದಲ್ಲಿ ಸೆಗಣಿ ಸಾರಿಸಿ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ಗಣವೇಷಧಾರಿಗಳು ಸಾಗುತ್ತಿದ್ದಂತೆ ಮಹಿಳೆಯರು ಪುಷ್ಪವೃಷ್ಟಿ ಸುರಿಸಿ ಭಾರತ್ ಮಾತಾಕಿ ಜೈ ಎಂದು ಜಯಘೋಷ ಕೂಗಿ ಹುರಿದುಂಬಿಸಿದರು. ಸಿಪಿಐ ಬಾಲಚಂದ್ರ ಡಿ.ಲಕ್ಕಂ ಮತ್ತು ಪಿಎಸ್‌ಐ ರಂಗಪ್ಪ ನೇತೃತ್ವದ ಪೊಲೀಸ್ ಸಿಬ್ಬಂದಿ ಪೊಲೀಸ್ ಭದ್ರತೆ ಒದಗಿಸಿದ್ದರು.