ಯಳಂದೂರು ತಾಲೂಕಿನ ಅಂಬಳೆ ಪಾಲದ ಬಳಿ ವಿದ್ಯುತ್ ಪರಿವರ್ತಕ ಕಳ್ಳತನ ಮಾಡಲು ಯತ್ನಿಸಿ ಸಾಗಣೆ ಮಾಡಲು ಸಾಧ್ಯವಾಗದೆ ಬಿಟ್ಟು ಹೋಗಿರುವುದು. 
ಜಿಲ್ಲೆ

ವಿದ್ಯುತ್ ಪರಿವರ್ತಕ ಕಳ್ಳತನಕ್ಕೆ ಯತ್ನ

ಮಾದೇಶ್ ತಿ.ನರಸೀಪುರ

ಯಳಂದೂರು: ತಾಲೂಕಿನ ಅಂಬಳೆ ಪಾಲದ ಬಳಿಯ ಸರ್ಕಲ್‌ನಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಪರಿವರ್ತಕ ಕಳ್ಳತನ ಮಾಡುವ ಯತ್ನ ನಡೆದಿದೆ.

ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕಂದಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಮೋಟಾರ್‌ಗೆ ಈ ವಿದ್ಯುತ್ ಪರಿವರ್ತಕವನ್ನು ಅಳವಡಿಸಲಾಗಿತ್ತು. ಇದನ್ನು ವಿದ್ಯುತ್ ಕಂಬದಿಂದ ಕಳ್ಳರು ಬೇರ್ಪಡಿಸಿದ್ದಾರೆ. ಆದರೆ ಸಾಗಣೆ ಮಾಡಲಾರದೆ ಇಲ್ಲೇ ಬಿಟ್ಟು ಹೋಗಿದ್ದಾರೆ. ಶನಿವಾರ ಬೆಳಗ್ಗೆ ಇಲ್ಲಿನ ಸಾರ್ವಜನಿಕರು, ರೈತರಿಗೆ ಮಾಹಿತಿ ದೊರೆತು ಸೆಸ್ಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸೆಸ್ಕ್‌ನ ಜೆಒ ಮಹದೇವಪ್ರಸಾದ್ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಿದ್ದಾರೆ.

.