ಅರಕಲಗೂಡಿನಲ್ಲಿ ಚಿನ್ನದ ಅಂಗಡಿಯಲ್ಲಿ ಕಳ್ಳತನ ನಡೆಸಲು ಯತ್ನಿಸಿದ ಸ್ಥಳಕ್ಕೆ ಶನಿವಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. 
ಜಿಲ್ಲೆ

ಜ್ಯುವೆಲ್ಲರಿ ಶಾಪ್‌ನಲ್ಲಿ ಕಳ್ಳತನಕ್ಕೆ ಯತ್ನ

ಅಭಿನಯ್ ಎಚ್.ಎಂ

ಅರಕಲಗೂಡು: ಪಟ್ಟಣದ ಪೇಟೆ ಮುಖ್ಯ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್‌ವೊಂದರ ಗೋಡೆಯ ಕನ್ನ ಕೊರೆಯುವ ಮೂಲಕ ಶುಕ್ರವಾರ ರಾತ್ರಿ ಕಳ್ಳತನ ಮಾಡಲು ವಿಫಲ ಯತ್ನ ನಡೆದಿದೆ.

ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಯಲ್ಲಿರುವ ಮಾತಾಜಿ ಜ್ಯುವೆಲ್ಲರಿ ಶಾಪ್‌ನ ಹಿಂಬದಿಯ ಗೋಡೆಯ ಕನ್ನ ಕೊರೆದಿರುವ ಕಳ್ಳರು ಗ್ಲಾಸ್ ಕಟರ್‌ಬಳಸಿ ಕತ್ತರಿಸುವ ವೇಳೆ ಪ್ಲೇವುಡ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಬೆದರಿದ ಕಳ್ಳರು ಪರಾರಿಯಾಗಿದ್ದಾರೆ.

ಬೆಂಕಿಯ ಕೆನ್ನಾಲಿಗೆ ಅಂಗಡಿಯೊಳಗೆ ವ್ಯಾಪಿಸಿದ ಪರಿಣಾಮ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ಮತ್ತು ಮರದ ವಸ್ತುಗಳು ಸುಟ್ಟು ಹಾನಿಯಾಗಿವೆ. ಅಂಗಡಿಯೊಳಗಿಂದ ಹೊಗೆ ಬರುತ್ತಿರುವುದನ್ನು ಶನಿವಾರ ಮುಂಜಾನೆ ಗಮನಿಸಿದ ಸ್ಥಳೀಯರು ಮಾಲೀಕರಿಗೆ ಸುದ್ದಿ ಮುಟ್ಟಿಸಿದರು. ಅಂಗಡಿ ಮಾಲೀಕರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಅಂಗಡಿಯೊಳಗೆ ತೆರಳಿದ ವೇಳೆ ಕಳತನಕ್ಕೆ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.

ಹೊಳೆನರಸೀಪುರ ಡಿವೈಎಸ್‌ಪಿ ಶಾಲು, ಸಿಪಿಐ ವಸಂತ್‌ಕುಮಾರ್, ಪಿಎಸ್‌ಐ ಸಿ.ಆರ್.ಕಾವ್ಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.