ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಗೃಹಿಣಿಯೊಬ್ಬರ ಅತ್ಯಾಚಾರಕ್ಕೆ ಯತ್ನಿಸಿ, ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರಿನ ಕಕ್ಕಾಡ್ ನಿವಾಸಿ, ತಳಿಪರಂಬದ ಕ್ವಾರ್ಟ್ರರ್ಸ್‌ನಲ್ಲಿ ವಾಸಿಸುವ ಶಿಹಾಬುದ್ದೀನ್ ತಂಙಳ್(52) ಎಂಬಾತನನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆನ್ನುನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಗಮಿಸಿದ ಮಂತ್ರವಾದಿ ತಂಙಳ್ ಅತ್ಯಾಚಾರಕ್ಕೆ ಯತ್ನಿಸಿ, ಥಳಿಸಿ ಗಾಯಗೊಳಿಸಿರುವುದಾಗಿ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಬೆನ್ನು ನೋವಿಗೆ ಚಿಕಿತ್ಸೆ ನೀಡಲು ತಂಙಳ್‌ನನ್ನು 55ರ ಹರೆಯದ ಮಹಿಳೆ ಮನೆಗೆ ಕರೆಸಿ ಚಿಕಿತ್ಸೆ ನಡೆಸುತ್ತಿದ್ದರು. ಚಿಕಿತ್ಸೆ ಮಧ್ಯೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದು, ತಡೆದಾಗ ತಂಙಳ್ ತನ್ನಿಂದ ಚಿನ್ನಾಭರಣ ಕೇಳಿದ. ಆಭರಣ ಬ್ಯಂಕ್ ಲಾಕರ್‌ನಲ್ಲಿದೆ ಎಂದು ತಿಳಿಸಿದಾಗ ಕಬ್ಬಿಣದ ಸಲಾಕೆಯಿಂದ ಥಳಿಸಿದ್ದಾಗಿ ದೂರಲಾಗಿದೆ.