ಜಿಲ್ಲೆ

ಕೊಲೆಗೆ ಯತ್ನ: ಅಪರಾಧಿಗಳಿಗೆ 7 ವರ್ಷ ಶಿಕ್ಷೆ

Vijyapura - Parsuram Bhasagi

ವಿಜಯಪುರ: ಕೊಲೆಗೆ ಯತ್ನಿಸಿದ ಅಪರಾಧಿಗಳಿಗೆ 7 ವರ್ಷ ಶಿಕ್ಷೆ ಹಾಗೂ 509000 ರೂಪಾಯಿ ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.

ದೊಂಡಿರಾಮ ಬಳವಂತ ಯಡ್ರಾವಕರ, ಅನೀಲ್ ದೊಂಡಿರಾಮ ಯದ್ರಾವಕರ, ಶಿವಾಜಿ ಬಳವಂತೆ ಯಡ್ರಾವಕರ, ಆಕಾಶ ಶಿವಾಜಿ ಯಡ್ರಾವಕರ, ಕಲ್ಲಪ್ಪ ತುಕರಾಮ ತೇಲಿ, ಸುಧೀರ ಊರ್ಫ್ ಸುದರ್ಶನ ಉತ್ತಮ ಪಾಟೀಲ್ ಶಿಕ್ಷೆಗೊಳಗಾದವರು.

2021ರ ಜು. 18 ರಂದು ಮಧ್ಯಾಹ್ನ ಜಿಗಜೀವಣಗಿ ಗ್ರಾಮದ ಸರಹದ್ದಿನಲ್ಲಿರುವ ಸುರಮುತ್ಯಾನ ತಾಂಡಾದ ಹತ್ತಿರದ ಸರ್ಕಾರಿ ಹಳ್ಳದಲ್ಲಿ ಗಲಾಟೆ ನಡೆದಿತ್ತು. ಬಾಪು ಊರ್ಫ್ ಬಾಪುರಾಯ ಮಾದೇವ ಯಡ್ರಾವಕರ ಈತ ತನ್ನ ಟ್ರಾೃಕ್ಟರ್ ಪಂಕ್ಚರ್ ತೆಗೆಯಿಸಿಕೊಂಡು ಜಮೀನಿನ ಕಡೆಗೆ ತೆರಳುವ ಸಂದರ್ಭ ಅಪರಾಧಿಗಳು ಅಡ್ಡಗಟ್ಟಿ, ಅವಾಚ್ಯವಾಗಿ ಬೈಯ್ದು, ಹೊಡೆದು ಕೊಲೆಗೆ ಯತ್ನಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಎಚ್.ಎ. ಮೋಹನ್ ಸಾಕ್ಷಾಧಾರಗಳನ್ನು ಪರಿಶೀಲಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವನಿತಾ ಎಸ್.ಇಟಗಿ ವಾದ ಮಂಡಿಸಿದ್ದರು.