ಜಿಲ್ಲೆ

ಮರ ಅಕ್ರಮ ಸಾಗಾಟ ಯತ್ನ, ಮೂವರು ವಶಕ್ಕೆ

ಸೌಮ್ಯ ಆರ್

ಕಡಬ: ಪಂಜ ಅರಣ್ಯ ವಲಯ ವ್ಯಾಪ್ತಿಯ ಆಲಂಕಾರಿನಲ್ಲಿ ಅಕ್ರಮವಾಗಿ ಮರ ಕಡಿದು ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ಮೂವರನ್ನು ಅರಣ್ಯಾಧಿಕಾರಿಗಳು ಭಾನುವಾರ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಸವಣೂರಿನ ನಾಸೀರ್, ನವಾಜ್, ತಿಂಗಳಾಡಿಯ ಸಿದ್ದಿಕ್ ಎಂದು ಗುರುತಿಸಲಾಗಿದೆ. ಅಲಂಕಾರು ಗ್ರಾಮದ ಕಕ್ವೆ ಸಮೀಪದ ಪಜ್ಜಾಪು ಎಂಬಲ್ಲಿ ಟನೆ ನಡೆದಿದೆ. 5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಬೃಹದಾಕಾರದ ಹೆಬ್ಬಲಸು ಮರ ಕಡಿದ ಸಂದರ್ಭ ವಿದ್ಯುತ್ ತಂತಿಗೆ ಬಿದ್ದಿದ್ದು, ಹೀಗಾಗಿ ಪ್ರಕರಣ ಬೆಳಕಿಗೆ ಬಂದಿದೆ. ಮರ ಬಿದ್ದ ಕಾರಣ ಆರಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಡಿತಗೊಂಡಿತ್ತು. ಮೆಸ್ಕಾಂ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಮೆಸ್ಕಾಂ ಇಲಾಖೆಗೆ ಆಗಿರುವ ನಷ್ಟವನ್ನು ಆರೋಪಿಗಳಿಂದಲೇ ಭರಿಸುವ ಬೆಳಗ್ಗೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.