ಮೈಸೂರು: ಉಡವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಹುಣಸೂರು ತಾಲೂಕಿನ ಚಿಕ್ಕಹುಣಸೂರು ಗ್ರಾಮದಲ್ಲಿ ಆಜಾದ್ ನಗರದ ಬಳಿ ಬುಧವಾರ ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿಸಿ ಉಡವನ್ನು ರಕ್ಷಿಸಿದ್ದಾರೆ.
ಒಂದನೇ ಪಕ್ಷಿರಾಜಪುರ ನಿವಾಸಿ ದೇವಕಾರಿ ಬಂಧಿತ ಆರೋಪಿ. ಈತ ಹುಣಸೂರು-ಎಚ್.ಡಿ. ಕೋಟೆ ರಸ್ತೆಯ ಆಜಾದ್ ನಗರದ ಅಂಗಡಿಯೊಂದರಲ್ಲಿ ಉಡವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ. ಕಾರ್ಯಾಚರಣೆಯಲ್ಲಿ ಡಿಸಿಎಫ್ ಚಂದ್ರಶೇಖರಗೌಡ ಸಿ. ಪಾಟಿಲ್, ಎಸಿಎಫ್ ಜಿ.ರುದ್ರೇಶ್, ಆರ್‌ಎಫ್‌ಒ ಕೆ. ಸುರೇಂದ್ರ, ಡಿಆರ್‌ಎಫ್‌ಒ ಸಿ.ಎಸ್.ಮೋಹನ್, ವಿ.ಮುತ್ತುರಾಜ್, ಬೀಟ್ ಫಾರೆಸ್ಟರ್ ಇಮಾಮ್‌ಸಾಬ್ ಸಾಗರಿ, ಎಚ್.ಆರ್.ವೆಂಕಟೇಶ್, ತಿರುಪತಿ ಪೂಜಾರ್ ಪಾಲ್ಗೊಂಡಿದ್ದರು.