ಜಿಲ್ಲೆ

ಕೊಲೆಗೆ ಯತ್ನ- 5ಸಾವಿರ ರೂ. ದಂಡ

ವೀರೇಶ ಸೌದ್ರಿ

ಶಿರಸಿ: ಕೊಲೆಗೆ ಯತ್ನಿಸಿದವನಿಗೆ ನಗರದ 1ನೇ ಅಧಿಕ ಮತ್ತು ಸತ್ರ ನ್ಯಾಯಾಲಯ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ನಗರದ ಮರಾಠಿಕೊಪ್ಪದ ನಿವಾಸಿ ಪರಮೇಶ್ವರ ಕನ್ನಾ ಪಿಳ್ಳೆ ಶಿಕ್ಷೆಗೊಳಗಾದ ವ್ಯಕ್ತಿ. ಈತ 2022ರ ಡಿ.2ರಂದು ಜಮೀನಿನ ವಿಷಯಕ್ಕೆ ಸಂಬಂಧಿಸಿ ತನ್ನ ಸಂಬಂಧಿಯಾದ ಈಶ್ವರ ಕೃಷ್ಣ ದೇವಾಡಿಗ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದ. ಈ ಕುರಿತಂತೆ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ ಕಿಣಿ, ಈ ಆದೇಶ ಪ್ರಕಟಿಸಿದ್ದು, ಅಪರಾಧಿ ದಂಡ ಕಟ್ಟಲು ವಿಫಲನಾದಲ್ಲಿ 10 ದಿನಗಳ ಸಾದಾ ಜೈಲು ಶಿಕ್ಷೆಗೆ ಒಳಪಡಿಸುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ರಾಜೇಶ ಮಳಗಿಕರ ವಾದ ಮಂಡಿಸಿದ್ದರು.