ಸಿರವಾರ ತಾಲೂಕಿನ ಅತ್ತನೂರಿನಲ್ಲಿ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಪುರಾಣ ಕಾರ್ಯಕ್ರಮದಲ್ಲಿ ಅಭಿನಯ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ನೀಲೋಗಲ್ ಬೃಹನ್ಮಠದ ಕಿರಿಯ ಶ್ರೀ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಶಿವಾನಂದಯ್ಯ ಸ್ವಾಮಿ ಇತರರಿದ್ದರು.  
ಜಿಲ್ಲೆ

26ರಂದು ದಿಡ್ಡಿ ಬಸವೇಶ್ವರ ಶಿಖರ ಉದ್ಘಾಟನೆ

ಸಿರವಾರ: ಅತ್ತನೂರು ಗ್ರಾಮದಲ್ಲಿ ರಾಚೋಟಿವೀರ ಶಿವಾಚಾರ್ಯ ಸ್ವಾಮಿಗಳ ಪುರಾಣ ಕಾರ್ಯಕ್ರಮವನ್ನು ಅಭಿನಯ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಉದ್ಘಾಟಿಸಿದರು.


ಶ್ರೀಗಳ ಆಶೀರ್ವಾದದಿಂದ ಒಳ್ಳೆಯ ಕಾರ್ಯಗಳು ಆಗುತ್ತಿವೆ. ಮಾ.26 ರಂದು ರಾಚೋಟಿವೀರ ಶಿವಾಚಾರ್ಯ ಸ್ವಾಮಿಗಳ ಪುಣ್ಯಸ್ಮರಣೆ ಅಂಗವಾಗಿ ದಿಡ್ಡಿ ಬಸವೇಶ್ವರ ದೇವಸ್ಥಾನದ ಶಿಖರ ಉದ್ಘಾಟಿಸಲಾಗುವುದು. ದೇವಸ್ಥಾನದಲ್ಲಿ ಗಣೇಶ ಮೂರ್ತಿ ಹಾಗೂ ನವಗ್ರಹಗಳ ಪ್ರತಿಷ್ಠಾಪನೆ, ಸಾಮೂಹಿಕ ವಿವಾಹ ಮತ್ತು ಅಯ್ಯಚಾರ ದೀಕ್ಷಾ ಕಾರ್ಯಕ್ರಮ ನಡೆಯಲಿದೆ ಎಂದರು.