ಜಡೆ ಮಠಕ್ಕೆ ಗೋದಾನ ಮಾಡಿದ ಭರತ್ ಮತ್ತು ರಶ್ಮಿ ದಂಪತಿ, ಸುನಂದಮ್ಮ ಅವರನ್ನು ಮಠದಿಂದ ಗೌರವಿಸಲಾಯಿತು. ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ, ಶ್ರೀ ನೀಲಕಂಠ ಸ್ವಾಮೀಜಿ, ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀ ವೃಷಭೇಂದ್ರ ಸ್ವಾಮೀಜಿ, ಡಿ.ಶಿವಯೋಗಿ, ಪುಟ್ಟಯ್ಯ ಇದ್ದರು.  
ಜಿಲ್ಲೆ

ಪರೋಪಕಾರದಿಂದ ಪುಣ್ಯ ಪ್ರಾಪ್ತಿ

ಸೊರಬ: ನಾವು ಮಾಡುವ ಭಕ್ತಿ ಪಕ್ವತೆಯಿಂದ ಕೂಡಿದಾಗ ಸೇವೆಯ ಸದ್ಗತಿ ದೊರೆಯಲು ಸಾಧ್ಯ. ದಾನಗಳಲ್ಲಿ ಗೋದಾನವು ಶ್ರೇಷ್ಠ ಎಂದು ಸೊರಬ ಮುರುಘಾಮಠ, ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘಾಮಠದಲ್ಲಿ ಜಡೆ ಮಠಕ್ಕೆ ಗೋದಾನ ಮಾಡಿದ ಶಿವಮೊಗ್ಗ ಸುನಂದಮ್ಮ, ಭರತ್ ಮತ್ತು ರಶ್ಮಿ ದಂಪತಿಗೆ ಶನಿವಾರ ಮಠದಿಂದ ಏರ್ಪಡಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿದೇಶದಲ್ಲಿ ನೆಲೆಸಿರುವ ಮಾತ್ರಕ್ಕೆ ಭಾರತೀಯ ಸಂಸ್ಕೃತಿ ಮರೆಯುವ ಕಾಲಘಟ್ಟದಲ್ಲಿ ಶಿವಮೊಗ್ಗದ ಭರತ್ ಕುಟುಂಬದ ಸದಸ್ಯರು ಭಾರತಿಯ ಸಂಸ್ಕೃತಿ ಪರಂಪರೆ ಉಳಿಸುವ ಕಾಯಕದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿ ಪರಂಪರೆ ಪಾಲಿಸುವ ಜತೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಗೋವುಗಳ ಸಂರಕ್ಷಣೆ ಮತ್ತು ಉಳಿವು ಕುರಿತು ವಿಶೇಷ ಆಸಕ್ತಿ ಹೊಂದಿದ್ದಾರೆ. ದಾನ, ಧರ್ಮ, ಪರೋಪಕಾರ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂದರು.
ಜಡೆಯ ಕಿರಿಯ ಜಗದ್ಗುರು ಶ್ರೀ ಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ, ಹಾರನಹಳ್ಳಿ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ, ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ನಂದಿ ಮಠದ ಶ್ರೀ ವೃಷಭೇಂದ್ರ ಸ್ವಾಮೀಜಿ, ಕಾರ್ಯದರ್ಶಿ ಡಿ.ಶಿವಯೋಗಿ, ಪುಟ್ಟಯ್ಯ ಇದ್ದರು..