ಜಿಲ್ಲೆ

ಧ್ಯಾನದಿಂದ ಪುಣ್ಯ ಪ್ರಾಪ್ತಿ

ಸೋಮಲಿಂಗ ತಳವಾರ

ಅರಟಾಳ: ಶ್ರಾವಣ ಮಾಸದಲ್ಲಿ ಧ್ಯಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಅರ್ಚಕ ರಾಮಪ್ಪ ಭಂಡಾರಿ ಹೇಳಿದರು.

ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವ ಹಾಗೂ ಕುಂಭ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಪಲ್ಲಕ್ಕಿ ಉತ್ಸವ ವಾದ್ಯಮೇಳ ಮತ್ತು 101 ಕುಂಭದೊಂದಿಗೆ ಗ್ರಾಮದ ಪ್ರಮುಖ ಓಣಿಗಳ ಮೂಲಕ ಸಾಗಿ ಮರಳಿ ದೇವಸ್ಥಾನ ತಲುಪಿತು.

ಅರ್ಚಕ ಮಲ್ಲಿಕಾರ್ಜುನ ಭಂಡಾರಿ, ಚನ್ನಬಸು ಬಿರಾದಾರ, ಸಿದ್ದಪ್ಪ ಹಿರೇಕುರಬರ, ಕಲ್ಲಪ್ಪ ಪಾಟೀಲ, ಬಸವರಾಜ ಭಂಡಾರಿ, ಕಲ್ಲನಗೌಡ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಅಶೋಕ ಆನಗೊಂಡಿ, ಮಾಳಪ್ಪ ಕಾಂಬಳೆ, ಕರೇಪ್ಪ

ಹಿರೇಕುರಬರ, ಮುತ್ತಪ್ಪ ಭಂಡಾರಿ, ಶಂಕರ ಮಾಳಿ, ಶಿವಾನಂದ ಪಾಟೀಲ, ಆನಂದ ಪಾಟೀಲ, ಪ್ರಶಾಂತ ದಮಡಿ, ಬೀರಪ್ಪ

ಬಬಲಾದಿ, ಶಿವಾನಂದ ಹಿರೇಕುರಬರ ಇತರರಿದ್ದರು.