ಮುದ್ದೇಬಿಹಾಳ ಪಟ್ಟಣದ ಪಾನಶಾಪ್​ ಅಂಗಡಿಯೊಂದರ ಮುಂಭಾಗ ತಂಬಾಕು ನಿಯಂತ್ರಣ ಕುರಿತ ಪೋಸ್ಟರ್​ ಅಳವಡಿಸಲಾಯಿತು. ಡಾ.ಸತೀಶ ತಿವಾರಿ, ಯಲ್ಲಪ್ಪ ಚಲವಾದಿ, ಎಂ.ಎಸ್​. ಗೌಡರ, ಅಮರೇಶ ಸಾಲಿ, ಆರ್​.ಎಸ್​. ಸಜ್ಜನ ಇತರರಿದ್ದರು. 
ಜಿಲ್ಲೆ

ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ

ಗಿರೀಶ ಸಗರ

ಮುದ್ದೇಬಿಹಾಳ: ಪಟ್ಟಣದಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನ ಮಾರುವ ಪಾನಶಾಪ್​ ಸೇರಿ ಇನ್ನಿತರ ಅಂಗಡಿಗಳ ಮೇಲೆ ತಂಬಾಕು ನಿಯಂತ್ರಣ ಕೋಶ, ತಾಲೂಕು ತಂಬಾಕು ತನಿಖಾ ದಳ ತಂಡ ಶುಕ್ರವಾರ ಜಂಟಿ ದಾಳಿ ನಡೆಸಿ 11 ಪ್ರಕರಣ ದಾಖಲಿಸಿಕೊಂಡು, 2100 ರೂ. ದಂಡ ವಿಧಿಸಿದೆ.

ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತೀಶ ತಿವಾರಿ ನೇತೃತ್ವದಲ್ಲಿ ಕೋಟ್ಪಾ& 2003 ಕಾಯ್ದೆ ಅಡಿ ಪಟ್ಟಣದ ಬಸವೇಶ್ವರ ವೃತ್ತದಿಂದ ಆಲಮಟ್ಟಿ ರೋಡ್​ವರೆಗೆ, ಮೇನ್​ ಬಜಾರ್​ ಸುತ್ತಮುತ್ತ ಹಾಗೂ ಮಾರ್ಗಮಧ್ಯದಲ್ಲಿನ ಪಾನ್​ಶಾಪ್​ ಹಾಗೂ ಹೋಟೆಲ್​ಗಳ ಮೇಲೆ ದಾಳಿ ನಡೆಸಲಾಯಿತು. ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಲಾಯಿತು.

ಎಲ್ಲ ಅಂಗಡಿಗಳ ಮುಂದೆ ಸೆನ್​ 4 ಮತ್ತು 6(ಎ) ಗಳನ್ವಯ ಎಚ್ಚರಿಕೆಯ ಸಂದೇಶದ ನಾಮಫಲಕಗಳನ್ನು ಅಳವಡಿಸಲಾಯಿತು. ತಂಬಾಕು ಉತ್ಪನ್ನಗಳ ಸಂಬಂಧಿಸಿದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಯಿತು.

ಳಿಯಲ್ಲಿ ಪೊಲೀಸ್​ ಇಲಾಖೆಯ ಎಎಸೈ ಅಮರೇಶ ಶಾಲಿ, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಣಾಧಿಕಾರಿ ಯಲ್ಲಪ್ಪ ಚಲವಾದಿ, ಎಂ.ಎಸ್​. ಗೌಡರ, ಆರ್​.ಎಸ್​. ಸಜ್ಜನ, ಇಸ್ಮಾಯಿಲ್​ ವಾಲಿಕಾರ, ವಿಬಿಡಿ ಮೇಲ್ವಿಚಾರಕ ಎಸ್​.ಸಿ. ರುದ್ರವಾಡಿ, ಪ್ರಶಾಂತ ಕಡಿ, ಪುರಸಭೆ ಸಿಬ್ಬಂದಿ ಪಾಲ್ಗೊಂಡಿದ್ದರು.