ಜಿಲ್ಲೆ

ಅಂತರ್ಜಾತಿ ಪ್ರೇಮಿಗಳು ಎಸ್ಕೇಪ್​: ಟಗರುಗಳನ್ನು ಕದ್ದೊಯ್ದು ಭರ್ಜರಿ ಬಾಡೂಟ ಮಾಡಿದ ಯುವತಿ ಮನೆಯವರು!

ವಿಜಯನಗರ: ಅಂತರ್ಜಾತಿಯ ಯುವಕ-ಯುವತಿ ಪರಸ್ಪರ ಪ್ರೀತಿಸಿ ಊರು ಬಿಟ್ಟ ಹಿನ್ನೆಲೆಯಲ್ಲಿ ಯುವತಿ ಮನೆಯವರು ಹುಡುಗನ ಮೇಲೆ ದಾಳಿ ಮಾಡಿರವುದಲ್ಲದೆ, ಸಂಬಂಧಿಕರ ಐದು ಮನೆಯನ್ನು ಹಾಳುಗೆಡವಿದ್ದಾರೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ (ಅಗ್ರಹಾರ) ಘಟನೆ ನಡೆದಿದೆ. ದುರ್ಗೇಶ್​ ಮತ್ತು ಕವಿತಾ ಪ್ರೀತಿಸಿ ಊರು ಬಿಟ್ಟಿದ್ದಾರೆ. ಇದರಿಂದ ಕುಪಿತಗೊಂಡ ಹುಡುಗಿಯ ಕಡೆಯವರು ಹುಡುಗನ ಮನೆಯನ್ನು ಧ್ವಂಸ ಮಾಡಿದ್ದಾರೆ.

ಮನೆಯಲ್ಲಿನ ಟಿವಿ ಒಡೆದು, ಹಣ, ಚಿನ್ನ, ಅಕ್ಕಿ ಬೆಳೆ, ಬಟ್ಟೆಯನ್ನು ಕದ್ದೊಯ್ದಿದ್ದಾರೆ. ಆಹಾರ ಪದಾರ್ಥಗಳ ಜತೆ, ಪಾತ್ರೆ ಪಗಡೆಗಳನ್ನು ಬಿಟ್ಟಿಲ್ಲ. ಇದರೊಂದಿಗೆ ದುರ್ಗೇಶ್​ ಸಂಬಂಧಿಕರಿಗೆ ಸೇರಿದ ಎರಡು ಎಮ್ಮೆ ಮತ್ತು ಎರಡು ಟಗರುಗಳನ್ನು ಕಳ್ಳತನ ಮಾಡಿದ್ದಾರೆ. ದುರ್ಗೇಶ್​ ಅಣ್ಣನ ಮನೆ ಮತ್ತು ಅಕ್ಕನ ಮನೆಯ ಎರಡು ಹೊಸ ಪಲ್ಸರ್​ ಬೈಕ್​ಗಳನ್ನು ಧ್ವಂಸ ಮಾಡಿದ್ದಾರೆ.

ಹಲ್ಲೆ ನಡೆಸಿ ಮನೆಗೆ ಹಾನಿ ಮಾಡಿದ್ದಲ್ಲದೆ, ಹುಡುಗನ ಸಂಧಿಕರಿಗೆ ಊರಿಗೆ ಕಾಲಿಡದಂತೆ ಬೆದರಿಕೆ ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹರಪನಳ್ಳಿ ಪೊಲೀಸ್ ಠಾಣೆಯಲ್ಲಿ 13 ಜನರ ಮೇಲೆ ಎಫ್​ಐಆರ್ ದಾಖಲಾಗಿದೆ. ಆದರೆ, ಇದುವರೆಗೂ ಪೊಲೀಸರು ಒಬ್ಬರನ್ನು ಬಂಧಿಸಿಲ್ಲ.

ಭರ್ಜರಿ ಬಾಡೂಟ ಯುವತಿ ಮನೆಯವರು ಹುಡುಗನ ಮನೆಯ ಟಗರುಗಳನ್ನು ಕದ್ದೊಯ್ದು ಬಾಡೂಟ ಮಾಡಿ ತಿಂದಿದ್ದಾರೆ. ಯುವತಿ ಸಂಬಂಧಿಕರು ಇಡೀ‌ ಮನೆಯನ್ನೇ ರಣರಂಗ ಮಾಡಿದ್ದಿ, ಯುವಕನ ಮನೆಯವರು ನಿಸ್ಸಾಹಯಕ ಸ್ಥಿತಿಯಲ್ಲಿದ್ದಾರೆ. (ದಿಗ್ವಿಜಯ ನ್ಯೂಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ