ಜಿಲ್ಲೆ

ವಿಟ್ಲ: ಕಾರು ತಪಾಸಣೆ ವೇಳೆ ಎಸ್‌ಐ ಮೇಲೆ ಗುಂಡಿನ ದಾಳಿ, ಮೂವರ ಬಂಧನ

reportermng

ವಿಟ್ಲ: ಕೇರಳದ ಕಾರು ತಪಾಸಣೆಯ ವೇಳೆ ಸಾಲೆತ್ತೂರು ಚೆಕ್ ಪೋಸ್ಟ್ ನಲ್ಲಿ ವಿಟ್ಲ ಎಸ್ ಐ ವಿನೋದ್ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಮೀಯಪದವು ಸಾಕೀರ್ ಯಾನೆ ಮಹಮ್ಮದ್ ವಾಕೀರ್ (26), ಬಂದಿಯೂರು ಅಬ್ದುಲ್ ಲತೀಫ್ ಯಾನ್ ಲತ್ತಿ ಯಾನೆ ಲತೀಫ್ (23), ಅಡ್ಕತ್ತಗುರಿ ಅಸಫ್ಕ್ (25) ಆರೋಪಿಗಳು.

ಕೇರಳದಿಂದ ಸಾಲೆತ್ತೂರು ಕೊಡಂಗೆ ಗಡಿ ಚೆಕ್‌ಪೋಸ್ಟ್‌ ಮೂಲಕ ಪೊಲೀಸರ ಕಣ್ತಪ್ಪಿಸಿ ಕಾರು ಕರ್ನಾಟಕ ಪ್ರವೇಶಿಸಲು ಯತ್ನಿಸಿದ್ದು, ಪೊಲೀಸರು ತಡೆದಾಗ ಗುಂಡಿನ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಎಸ್‌ಐ ವಿನೋದ್ ರೆಡ್ಡಿ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.