ಜಿಲ್ಲೆ

ಗೋಮಾಂಸ ಅಂಗಡಿ ಮೇಲೆ ದಾಳಿ, ಮೂವರು ಆರೋಪಿಗಳು ಸ್ಥಳದಿಂದ ಪರಾರಿ

Bengaluru Rural

ಆನೇಕಲ್: ಸರ್ಜಾಪುರ ಸಮೀಪದ ಅಡಿಗರ ಕಲ್ಲಹಳ್ಳಿ ಗ್ರಾಮದಲ್ಲಿ ಸರ್ಕಾರ ನಿಯಮ ಉಲ್ಲಂಸಿ ಗೋ ಮಾಂಸ ಮಾರಾಟ ಮಾಡುತ್ತಿದ್ದವರ ಮೇಲೆ ತಹಸೀಲ್ದಾರ್ ಮಹದೇವಯ್ಯ ನೇತೃತ್ವದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಯಾವುದೇ ಪರವಾನಗಿ ಇಲ್ಲದೆ ರಸ್ತೆಯಲ್ಲಿಯೇ ಶೆಡ್ ನಿರ್ಮಿಸಿ ಗೋಮಾಂಸ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಪೊಲೀಸರು ಶೆಡ್‌ಗಳನ್ನು ತೆರವುಗೊಳಿಸಿದರು. ಸರ್ಜಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.

ಮಾಂಸ ಕೊಂಡೋಯ್ದರು: ತಹಸೀಲ್ದಾರ್ ದಾಳಿ ವೇಳೆ ಆರೋಪಿಗಳು ಪರಾರಿಯಾದರೆ ಕೆಲವರು ಸ್ಥಳಕ್ಕೆ ಆಗಮಿಸಿ ತಹಸೀಲ್ದಾರ್ ಎದುರೇ ಅಂಗಡಿಯಲ್ಲಿ ನೇತುಹಾಕಿದ್ದ ಗೋಮಾಂಸವನ್ನು ಬೇರೆಡೆ ಕೊಂಡ್ಯೊಯ್ದರು ಎನ್ನಲಾಗಿದ್ದು, ಇಲ್ಲಿ ಯಾವ ಭಯವಿಲ್ಲದೆ ಅಕ್ರಮವಾಗಿ ಗೋಮಾಂಸ ಮಾರಾಟ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಕಂಡು ಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡಿ. ಮಹಾದೇವಯ್ಯ ತಹಸೀಲ್ದಾರ್, ಆನೇಕಲ್