ಜಮಖಂಡಿ ನಗರದ ವಿವಿಧ ಹೋಟೆಲ್, ಬೀದಿ ಬದಿಯ ಗೂಡಂಗಡಿಗಳ ಮೇಲೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗಳ ಅಧಿಕಾರಿಗಳು ದಾಳಿ ನಡೆಸಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಂಡರು.  
ಜಿಲ್ಲೆ

ಬೀದಿ ಬದಿ ಗೂಡಂಗಡಿಗಳ ಮೇಲೆ ದಾಳಿ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ಗುರುವಾರ ನಗರದ ವಿವಿಧ ಹೋಟೆಲ್, ಬೀದಿ ಬದಿ ಗೂಡಂಗಡಿಗಳ ಮೇಲೆ ದಾಳಿ ನಡೆಸಿದರು.

ವಿವಿಧ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಟೇಸ್ಟಿಂಗ್ ಪೌಡರ್, ಬಣ್ಣ ಮಿಶ್ರಿತ ಚಹಾಪುಡಿ, ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿದರು.

ಪರವಾನಗಿ ಪಡೆಯದ, ನವೀಕರಿಸದ, ಕೆಲಸಗಾರರ ವೈದ್ಯಕೀಯ ತಪಾಸಣೆ ಪತ್ರ ಇಲ್ಲದಿರುವುದು, ಅಸ್ವಚ್ಛತೆ, ತಟ್ಟೆ, ಚಮಚೆಗಳನ್ನು ಕುದಿಯುವ ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸದಿರುವುದು, ಅಡುಗೆ ಮಾಡುವವರು ಸುರಕ್ಷತಾ ಕವಚ ಧರಿಸದ ಹೋಟೆಲ್‌ಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಯಿತು.
ಆಹಾರ ಸುರಕ್ಷತಾಧಿಕಾರಿ ಸುರೇಶ ಹೊಸಮನಿ ಮಾತನಾಡಿ, ಪ್ರತಿ 15 ದಿನಕ್ಕೊಮ್ಮೆ ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಗುವುದು. ಹೀಗೆ ಮುಂದುವರಿಸಿದರೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಆಹಾರ ಸುರಕ್ಷಣಾಧಿಕಾರಿ ಅಪ್ಪಾಜಿ ಹೂಗಾರ, ಆಹಾರ ಶಿರಸ್ತೇದಾರ ಎಸ್.ಡಿ. ದಳವಾಯಿ, ಆಹಾರ ನಿರೀಕ್ಷಕ ಮಂಜುನಾಥ ದೊಡಮನಿ, ಆನಂದ ರಾಠೋಡ, ಕಾರ್ಮಿಕ ನಿರೀಕ್ಷಕಿ ಶಕುಂತಲಾ ತುಪ್ಪದ, ಅಕ್ಷರ ದಾಸೋಹ ಅಧಿಕಾರಿ ಪಿ.ಎಸ್. ಕಲ್ಯಾಣಿ, ಆರೋಗ್ಯ ಇಲಾಖೆಯ ಸಂತೋಷ ನಾಯಕ ಇತರರಿದ್ದರು.