ಜಿಲ್ಲೆ

ಪೊಲೀಸರ ಮೇಲೆ ಹಲ್ಲೆ, ಆರು ಜನರ ವಿರುದ್ಧ ಎಫ್‌ಐಆರ್

ಮೈಸೂರು: ಕರ್ತವ್ಯನಿರತ ಪೊಲೀಸರ ಮೇಲೆ ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿದ ಆರು ಜನರ ವಿರುದ್ಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ಎಫ್‌ಐಆರ್ ದಾಖಲಾಗಿದೆ.

ನಗರದ ಕೀರ್ತಿರಾಜ್, ಸುರೇಶ್, ಶರತ್, ಮದನ್, ಆದರ್ಶ್, ಚಿದಾನಂದ ಎಂಬುವರು ಆರೋಪಿಗಳು. ಕೆಂಪರಾಜು ದೂರು ನೀಡಿದ ಪೇದೆ.


ಮೇ 11ರಂದು ಮಧ್ಯರಾತ್ರಿ 12ರ ಸಮಯದಲ್ಲಿ ಬೀಟ್‌ನಲ್ಲಿದ್ದಾಗ ಪಾರ್ವತಿ ಕಲ್ಯಾಣಮಂಟಪದ ಎದುರಿನ ರಸ್ತೆಯಲ್ಲಿ ಐದಾರು ಜನ ಮದ್ಯಪಾನ ಮಾಡುತ್ತಾ ಜೋರಾಗಿ ಕೂಗಾಡುತ್ತಿದ್ದರು.

ಅವರ ಬಳಿ ಹೋಗಿ ಕೂಗಾಡದಂತೆ ತಿಳಿ ಹೇಳಿದೆವು. ಆಗ ಒಬ್ಬ ನನ್ನ ಕೊರಳಪಟ್ಟಿ ಹಿಡಿದು, ಕೈಯಲ್ಲಿ ತಲೆಗೆ ಹೊಡೆದ. ಮತ್ತೊಬ್ಬ ಕಾಲಿನಿಂದ ಒದ್ದ.

ರಕ್ಷಣೆಗೆ ಬಂದ ಕರಿಯಪ್ಪನ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.