ದೊಡ್ಡಬಳ್ಳಾಪುರದ ವಕೀಲ ಸಂದಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ರವಿ ಮಾವಿನಕುಂಟೆ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ವಿಜಯಕುಮಾರ್​, ಖಜಾಂಚಿ ಎಂ.ಮುನಿರಾಜು, ರೇಣುಕಾರಾಧ್ಯ ಇದ್ದರು. 
ಜಿಲ್ಲೆ

ವಕೀಲರ ಮೇಲಿನ ಹಲ್ಲೆ ಖಂಡನೀಯ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ: ಹೊಸಕೋಟೆ ಮೂಲದ ವಕೀಲ ಎಸ್​.ಪಿ.ಮುನಿರಾಜು ಮೇಲೆ ಜಿಲ್ಲಾಧಿಕಾರಿ ಮುಂದೆಯೆ ಆ.5ರಂದು ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿರುವ ಟನೆ ಇಡೀ ವಕೀಲ ಸಮೂಹಕ್ಕೆ ಭೀತಿಯುಂಟು ಮಾಡಿದೆ ಎಂದು ತಾಲೂಕು ವಕೀಲರ ಸಂದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹೇಳಿದರು.

ತಾಲೂಕು ವಕೀಲರ ಸಂದಿಂದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಮುಂದೆಯೇ ಕೈ ಎತ್ತಿ, ನಿಂದಿಸಿ, ಬೇದರಿಕೆ ಹಾಕುವಂತ ಟನೆ ನಡೆದಿದ್ದರೂ, ಜಿಲ್ಲಾಧಿಕಾರಿ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ನೋವಿನ ಸಂಗತಿ. ಸದ್ಯ ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ. ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿರುವುದು ದುರಂತವಾಗಿದೆ. ವಕೀಲರ ರಕ್ಷಣೆಗೆ ಕಾಯ್ದೆ ಇದ್ದರೂ ಉಪಯೋಗ ವಿಲ್ಲದಂತಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಶ್ರೀ ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಕೋರ್ಟ್​ ಕಲಾಪಗಳನ್ನು ಬಹಿಷ್ಕಾರ ಮಾಡಿ ಹೋರಾಟದ ಕಾವು ಹೆಚ್ಚಿಸಲಾಗುವುದು ಎಂದರು.