ಹಿರೇಶೆಲ್ಲಿಕೇರಿ ಬಳಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಮೇಲೆ ಬಾಗಲಕೋಟೆ ತಹಸೀಲ್ದಾರ್ ಅಮರೇಶ ನಾಯಕ ಮತ್ತವರ ತಂಡ ದಾಳಿ ನಡೆಸಿತು. 
ಜಿಲ್ಲೆ

ಅಕ್ರಮ ಗಣಿಗಾರಿಕೆ ಮೇಲೆ ದಾಳಿ

Vijayapura - Desk - Gurappa Lokuri

ಕಲಾದಗಿ: ಸಮೀಪದ ಹಿರೇಶೆಲ್ಲಿಕೇರಿ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ಬಾಗಲಕೋಟೆ ತಹಸೀಲ್ದಾರ್ ಅಮರೇಶ ನಾಯಕ ನೇತೃತ್ವದ ತಂಡ ಮಂಗಳವಾರ ಬೆಳಗ್ಗೆ ದಾಳಿ ನಡೆಸಿ ವಾಹನ, ಕಲ್ಲುಗಳನ್ನು ವಶಪಡಿಸಿಕೊಂಡಿದೆ. ಹಿರೇಶೆಲ್ಲಿಕೇರಿಯ 107/1 ಸರ್ವೇ ನಂ. ಹಾವಣ್ಣವರ್ ಎಂಬುವವರ ಮಾಲೀಕತ್ವಕ್ಕೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಮೂರ್ತಿ ಮಾಡುವ ಕಲ್ಲುಗಳನ್ನು ತೆಗೆಯುತ್ತಿರುವುದು ದಾಳಿ ವೇಳೆ ಪತ್ತೆಯಾಗಿದೆ. ಕಲ್ಲು ತೆಗೆಯಲು ಉಪಯೋಗವಾಗುವ ಜೆಸಿಬಿ, ಹಿಟಾಚಿ ವಾಹನಗಳು ಗಣಿಗಾರಿಕೆ ಪ್ರದೇಶದಲ್ಲಿ ಕಂಡುಬಂದಿವೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕ ವಿವೇಕ, ಕಂದಾಯ ನಿರೀಕ್ಷಕ ಪ್ರಶಾಂತ ನಾಯಕ, ಗ್ರಾಮಲೆಕ್ಕಾಧಿಕಾರಿ ರವಿಕುಮಾರ ಕುಳ್ಳೊಳ್ಳಿ ದಾಳಿಯಲ್ಲಿದ್ದರು.