ಚಿಕ್ಕಮಗಳೂರಿನಲ್ಲಿ ವಿಜಯದಶಮಿ ಆಂಗವಾಗಿ ನಡೆದ ಆರ್ ಎಸ್ ಎಸ್ ಪಥಸಂಚಲನ ಉತ್ಸವದಲ್ಲಿ ಗಣವೇಶದಾರಿಗಳು ಹೆಜ್ಜೆ ಹಾಕಿದರು. 
ಜಿಲ್ಲೆ

ಹಿಂದೂಗಳ ಮೇಲಿನ ಹಲ್ಲೆಗೆ ಒಗ್ಗಟ್ಟಿನ ಕೊರತೆ ಕಾರಣ

ಚಿಕ್ಕಮಗಳೂರು: ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ನೆರೆ ರಾಷ್ಟçಗಳಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ, ಅತ್ಯಾಚಾರ, ಹಿಂಸಾ ಕೃತ್ಯಗಳು ನಡೆಯುತ್ತಿರುವುದಕ್ಕೆ ಹಿಂದೂಗಳ ಒಗ್ಗಟ್ಟಿನ ಕೊರತೆ ಕಾರಣವಾಗಿದೆ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಶಾರೀರಿಕ್ ಪ್ರಮುಖ್ ಸತೀಶ್ ಕುತ್ಯಾರ್ ಅಭಿಪ್ರಾಯಪಟ್ಟರು.

ವಿಜಯದಶಮಿ ಅಂಗವಾಗಿ ನಗರದಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥಗಳನ್ನು ಮರೆತು ಹಿಂದೂಗಳು ಜಗತ್ತಿನಾದ್ಯಂತ ಸಂಘಟಿತರಾಗಬೇಕಿದೆ. ಆ ಕಾರಣದಿಂದಲೇ ರಾಷ್ಟಿçÃಯ ಸ್ವಯಂ ಸೇವಕ ಸಂಘ ವಿವಿಧ ಆಯಾಮಗಳಲ್ಲಿ ಸಮಾಜವನ್ನು ಸಂಘಟಿಸುವ ಮತ್ತು ಒಗ್ಗೂಡಿಸುವ ಕಾರ್ಯ ನಿರಂತರವಾಗಿ ನಡೆಸುತ್ತಿದೆ ಎಂದು ಹೇಳಿದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷಗಳು ತುಂಬುತ್ತಿದ್ದು, ೨೦೨೫ಕ್ಕೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಂಚಪರಿವರ್ತನೆಗಳಾದ ಸಾಮಾಜಿಕ ಸಾಮರಸ್ಯ, ಪರಿಸರ ಜಾಗೃತಿ, ಕುಟುಂಬ ಪ್ರಬೋಧನ, ಸ್ವದೇಶಿ ಮತ್ತು ನಾಗರಿಕ ಸಂಹಿತೆ ಮೂಲಕ ಹಿಂದೂ ಸಮಾಜದ ಜೊತೆಗೆ ರಾಷ್ಟçವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ನಗರದ ಭುವನೇಂದ್ರ ವಿದ್ಯಾ ಸಂಸ್ಥೆ ಆವರಣದಲ್ಲಿ ಸಮಾವೇಶಗೊಂಡಿದ್ದ ಗಣವೇಶದಾರಿಗಳು ಘೋಷ್ ವಾದನಕ್ಕೆ ತಕ್ಕಂತೆ ಶಿಸ್ತುಬದ್ಧವಾಗಿ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು. ಭುವನೇಂದ್ರ ಶಾಲಾ ಆವರಣದಿಂದ ಆರಂಭಗೊAಡ ಪಥಸಂಚಲನ ನಗರದ ನಾರಾಯಣಪುರ ರಸ್ತೆ, ಶ್ರೀ ಲೇಖಾ ಥಿಯೇಟರ್, ಬಸವನಹಳ್ಳಿ ಮುಖ್ಯ ರಸ್ತೆ, ರಾಘವೇಂದ್ರಸ್ವಾಮಿ ಮಠದ ರಸ್ತೆ ಮೂಲಕ ಸಾಗಿದಾಗ ವಿವಿಧ ಕಡೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದ ಜನರು ಪುಷ್ಪಗಳನ್ನು ಸುರಿಸಿ, ಪಟಾಕಿಗಳನ್ನು ಸಿಡಿಸಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಬೌದ್ಧಿಕ್ ನಡೆದ ವೇದಿಕೆಯಲ್ಲಿ ಉನ್ನತಿ ಎಂಟರ್‌ಪ್ರೆÊಸಸ್ ಮಾಲಿಕ ಮೋಹನ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ ಘನಶ್ಯಾಮ ಆಳ್ವ, ನಗರ ಸಂಘಚಾಲಕ ರಾಜಾರಾಂ ಕೋಟೆ ಉಪಸ್ಥಿತರಿದ್ದರು.