ಜಿಲ್ಲೆ

ಬೇಕರಿಯಲ್ಲಿ ಹಣ ನೀಡದೆ ಹಲ್ಲೆ ನಡೆಸಿ ಪರಾರಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಹೂಟಗಳ್ಳಿಯ ಕೆಎಚ್‌ಬಿ ಕಾಲನಿಯಲ್ಲಿರುವ ಕೃಷ್ಣ ಬೇಕರಿಯಲ್ಲಿ ತಿಂಡಿ ತಿಂದ ಇಬ್ಬರು ಯುವಕರು ಹಣ ಕೇಳಿದ ಅಲ್ಲಿಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಚಿನ್ನದ ಸರವನ್ನೂ ದೋಚಿ ಪರಾರಿಯಾಗಿದ್ದಾರೆ.


ಬೆಳವಾಡಿ ನಿವಾಸಿಗಳಾದ ಪ್ರಜ್ವಲ್ ಹಾಗೂ ಸಂಜು ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂ.2ರಂದು ರಾತ್ರಿ ಬೇಕರಿಗೆ ಬಂದ ಈ ಇಬ್ಬರು ಯುವಕರು ತಿಂಡಿ ಖರೀದಿಸಿದ್ದಾರೆ.

ಬಳಿಕ ಹಣ ಕೇಳಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿ, ಕತ್ತಿನಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಹಲ್ಲೆಗೆ ಒಳಗಾದ ನೌಕರ ಮಹಮ್ಮದ್ ಹಾಜಿದ್ ದೂರಿನಲ್ಲಿ ತಿಳಿಸಿದ್ದಾರೆ.