ಜಿಲ್ಲೆ

ಮಹಿಳೆ ಮೇಲೆ ಮಾರಕಾಸ್ತ್ರದಿಂದ ದಾಳಿ

Mangaluru - Nishantha Narayana

ವಿಟ್ಲ: ಜಾಗದ ತಕರಾರಿನ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಕತ್ತಿಯಿಂದ ಮಹಿಳೆಯೊಬ್ಬಳ ಮೇಲೆ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಾಕೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೊಳ್ನಾಡು ಗ್ರಾಮದ ತಾಳಿತ್ತನೂಜಿ ನಿವಾಸಿ ಹಸೀನಾ (೨೩) ಗಾಯಗೊಂಡವರು. ಮಹಮ್ಮದ್ ಅಶ್ರಫ್ (೩೨) ಕೃತ್ಯ ಎಸಗಿ ಬಂಧಿತನಾಗಿದ್ದಾನೆ. ತಾಳಿತ್ತನೂಜಿ ನಿವಾಸಿ ಸುಲೈಮಾನ್ ಅವರ ಪ್ರಥಮ ಪತ್ನಿಯ ಪುತ್ರ ಮಹಮ್ಮದ್ ಅವರ ಪುತ್ರಿ ಹಸೀನಾ ಮೇಲೆ ದ್ವಿತೀಯ ಪತ್ನಿ ಪುತ್ರ ಮಹಮ್ಮದ್ ಅಶ್ರಫ್ ಕತ್ತಿಯಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ಮಹಿಳೆ ಕುತ್ತಿಗೆಗೆ ಕತ್ತಿ ಬೀಸುವ ಸಂದರ್ಭ ಕೈ ಅಡ್ಡ ತಂದಿದ್ದು, ಬೆರಳಿಗೆ ಗಂಭೀರ ಗಾಯವಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣೆ ಉಪನಿರೀಕ್ಷಕ ರತ್ನಾಕರ ಹಾಗೂ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.